ವಂದೇ ಭಾರತ್ ರೈಲು ಸೇವೆಯಿಂದ ಸಂಪರ್ಕ, ಆಧ್ಯಾತ್ಮಿಕ ಪ್ರವಾಸೋದ್ಯಮ ವೃದ್ಧಿ: ಪ್ರಧಾನಿ ಮೋದಿ

 ನವದೆಹಲಿ, ಅ 3:  ನವದೆಹಲಿಯಿಂದ ಕತ್ರಾ ನಡುವೆ ಹೊಸದಾಗಿ ಆರಂಭಗೊಂಡ  'ನ್ಯೂ ಒಂದೇ ಭಾರತ್ ಎಕ್ಸ್ ಪ್ರೆಸ್ ರೈಲು' ಕೇವಲ ಸಂಪರ್ಕ ವೃದ್ಧಿ ಮಾತ್ರವಲ್ಲ ಆಧಾತ್ಮಿಕ ಪ್ರವಾಸೋದ್ಯಮಕ್ಕೆ ಅಪಾರ ಕೊಡುಗೆ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ನವದೆಹಲಿ ಮತ್ತು ಕತ್ರಾದ ಮಾ ವೈಷ್ಣೋ ದೇವಿ ನಡುವೆ ವಂದೇ ಭಾರತ್ ರೈಲು ಸೇವೆಯನ್ನು ಉದ್ಘಾಟಿಸಲಾಗಿದೆ. ಇದು ಜಮ್ಮುವಿನ ಸಹೋದರ ಮತ್ತು ಸಹೋದರಿಯರಿಗೆ, ಮಾ ವೈಷ್ಣೋ ದೇವಿಯ ಭಕ್ತರಿಗೆ ನವರಾತ್ರಿ ಉಡುಗೊರೆಯಾಗಿದೆ ಎಂದು ಅವರು ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಜಮ್ಮುವಿನ ನನ್ನ ಸಹೋದರ, ಸಹೋದರಿಯರಿಗೆ ಮತ್ತು ಮಾ ವೈಷ್ಣೋ ದೇವಿಯ ಭಕ್ತರಿಗೆ ನವರಾತ್ರಿ ಉಡುಗೊರೆ! ನವದೆಹಲಿಯಿಂದ ಕತ್ರಾದ ಮಾ ವೈಷ್ಣೋ ದೇವಿವರೆಗಿನ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ, ಸಂಪರ್ಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಸುಧಾರಿಸಲಿದೆ. ಎಲ್ಲರಿಗೂ ಅಭಿನಂದನೆಗಳು!  ಎಂದು ತಿಳಿಸಿದರು. ಇಂದು ಬೆಳಗ್ಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ನೀಡಿದ್ದರು. ಪ್ರಸಕ್ತ ದೆಹಲಿ ಮತ್ತು ಕತ್ರಾದ ನಡುವೆ ಪ್ರಯಾಣದ ಅವಧಿ 12 ಗಂಟೆಗಳಾಗಿದ್ದು, ಈ ರೈಲು ಸೇವೆಯಿಂದ 8 ಗಂಟೆಗೆ ಇಳಿಕೆಯಾಗಿದೆ. ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಹೈಸ್ಪೀಡ್ ರೈಲು ಸಂಚರಿಸಲಿದ್ದು, ಪ್ರಥಮ ವಾಣಿಜ್ಯ ಸೇವೆ ಅಕ್ಟೋಬರ್ 5ರಂದು ಆರಂಭಗೊಳ್ಳಲಿದೆ.  22439 ಸಂಖ್ಯೆಯ ರೈಲು ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ನವದೆಹಲಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಕತ್ರಾ ತಲುಪಲಿದೆ. ಇದು ಅದೇ ದಿನ ಕತ್ರಾದಿಂದ ಮಧ್ಯಾಹ್ನ  3 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ನವದೆಹಲಿ ರೈಲ್ವೆ ನಿಲ್ದಾಣ ತಲುಪಲಿದೆ.