ಲೋಕದರ್ಶನವರದಿ
ಧಾರವಾಡ: ಪರಮಾತ್ಮನ ಪ್ರಭಾವ ಆತ್ಮನಿಗೆ ಆತ್ಮನ ಪ್ರಭಾವ ಪ್ರಕೃತಿಗೆ ಬಿರುತ್ತಿರುತ್ತದೆ. ಒಂದು ವೇಳೆ ಮನುಷ್ಯನ ಮನಸ್ಸು ಪ್ರದುಷನೆಗೊಂಡರೆ ಪ್ರಕೃತಿಯೂ ಸಹ ಪ್ರದುಶನೆಗೊಳ್ಳುವುದು ಇದಕ್ಕೆ ವರ್ತಮಾನ ಸಮಯದ ಕಲುಶೀತತೆಯೇ ಕಾರಣ ಎಂದು ಗದುಗಿನ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ ಬ್ರಹ್ಮ ಕುಮಾರಿ ಜಯಂತಿ ಅಕ್ಕನವರು ಮಾತನಾಡಿದರು.
ವಾಹನಗಳ ಸಂಖ್ಯೆ ಜಾಸ್ತಿಯಾದಂತೆ ಗಾಳಿಯ ಪ್ರದುಶನೆ, ಶಬ್ದ ಪ್ರದುಶನೆ ಜಾಸ್ತಿಯಾಯಿತು. ರಾಸಾಯನಿಕ ಗೊಬ್ಬರ ಬಳಸಿ ಮಣ್ಣು ಕಲುಷಿತಗೊಂಡಿತು. ಆಧುನಿಕ ಉಪಕರಣಗಳ ಬಳಕೆಯಿಂದ ಮಾನವನ ದೇಹ ಎನ್ನುವ ಯಂತ್ರ ಕೆಟ್ಟು ಹೋಯಿತು. ಪಂಚತತ್ವ ಕಲುಷಿತವಾದಕೂಡಲೇ ಪಂಚತತ್ವಗಳಿಂದಾದ ದೇಹಕ್ಕೆ ಎಲ್ಲೆಲ್ಲಿಂದ ರೋಗ ಬಂತು. ಕಂಗಾಲಾದ ಮನುಷ್ಯನ ಜೀವನಕ್ಕೆ ಈಶ್ವರೀಯ ವಿಶ್ವ ವಿದ್ಯಾಲಯ ಸತ್ಯ ಜ್ಞಾನವನ್ನು ನೀಡಿ ಮೇಡಿಟೇಷನ ಅಭ್ಯಾಸ ಮಾಡಿಸಿ ಮನುಷ್ಯನ ಮನಸ್ಸಿನ ಮಲೀನತೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ. ಆಮೂಲಕ ನಮ್ಮ ಆರೋಗ್ಯವನ್ನು ಪರಿಸರವನ್ನು ರಕ್ಷಿಸೋಣ ಎಂದು ತಿಳಿಸಿದರು.
ಪರಿಸರ ದಿನಾಚರಣೆಯನ್ನು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನೆರೇದಿರುವ ಸಬೀಕರಿಂದ ಪ್ರತಿಜ್ಞೆ ಮಾಡಿಸುತ್ತಾ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸೋಣ ನಮ್ಮ ಮನೆಯ ಮುಂದಿರುವ ರಸ್ತೆ, ಓಣಿ, ಸ್ವಚ್ಛವಾಗಿಡೋಣ ಪ್ರತಿನಿತ್ಯ 10 ನಿಮಿಷ ಪರಿಶುದ್ಧ ಮನಸ್ಸಿನಿಂದ ಪ್ರಕೃತಿಗೆ ಸಕಾರಾತ್ಮಕ ಪ್ರಕಂಪನವನ್ನು ಹರಿಸೋಣ ಒಬ್ಬೊಬ್ಬರೂ ಒಂದೊಂದು ಗಿಡವನ್ನು ಮಗುವಿನಂತೆ ಬೆಳಸೋಣ ಎಂದು ಹೇಳಿ ಗಿಡಗಳನ್ನು ದಾನ ಮಾಡುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಡಾ|| ವಿಜಯಕುಮಾರ ಸಜ್ಜನರ್, ಡಾ|| ನರ್ಮತಾ ಸಜ್ಜನರ್, ಸೋಮಾ ದೇಸಾಯಿ, ಶಿವಪ್ಪ ಸಜ್ಜನರ್, ಪ್ರೇಮಾ ಸಜ್ಜನರ್, ಗಿರೀಜಾ ಸಜ್ಜನರ್, ಪ್ರಭುರಾಜ ದೇಸಾಯಿ, ನಟರಾಜ ದೇಸಾಯಿ, ಆರತಿ ಜೀರನಕಳ್ಳಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಲ್ಲಿಕಾಜರ್ುನ ಪಾಟೀಲ, ವಿಜಯಲಕ್ಷ್ಮೀ ಕುಲಕಣರ್ಿ, ಬಸವರಾಜ ಬಿಂಗಿ, ಶಶಿಕಲಕ್ಕ ಹಡಗಲಿಮಠ, ಪ್ರೇಮಾಕ್ಕ ಪೂಜಾರ, ಲಲೀತಕ್ಕ ಹಸಬಿ, ಪಿ.ವ್ಹಿ.ಕೋಟಿಗೌಡರ, ಯಲ್ಲಮ್ಮ ಭಜಂತ್ರಿ, ಸವಿತಾ ಹಾದಿಮನಿ, ಯಲ್ಲಪ್ಪ ತಿಪ್ಪಾಪೂರ ಮೊದಲಾದವರೂ ಗಿಡಗಳನ್ನು ದಾನರೂಪದಲ್ಲಿ ಪಡೆದುದ್ದನ್ನು ಚಿತ್ರದಲ್ಲಿ ಕಾನಬಹುದು ಕಾರ್ಯಕ್ರಮದ ಮಹತ್ವತೆ ಹಾಗೂ ಸ್ವಾಗತವನ್ನು ಬ್ರಹ್ಮ ಕುಮಾರಿ ರೇಖಾಕ್ಕ ನೆರವೇರಿಸಿದರು. ಬ್ರಹ್ಮಕುಮಾರಿ ಶೈಲಕ್ಕ ವಂದಿಸಿದರು.