ಆಲಮಟ್ಟಿ ಎಂ.ಎಚ್‌.ಎಂ.ಪದವಿ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ

 ಆಲಮಟ್ಟಿ ಎಂ.ಎಚ್‌.ಎಂ.ಪದವಿ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ Valmiki Jayanti celebrated at Almatti MHM Degree College

ಲೋಕದರ್ಶನ ವರದಿ 

ಆಲಮಟ್ಟಿ ಎಂ.ಎಚ್‌.ಎಂ.ಪದವಿ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ 

ಕವಿಋಷಿ ವಾಲ್ಮೀಕಿ ಚಿಂತನೆ ಅತ್ಯೋನ್ನತ: ಹೇಮಗಿರಿಮಠ 

ಆಲಮಟ್ಟಿ 11: ಸಾಮಾಜಿಕ ಸಂಬಂಧಗಳ ವಿಚಾರಗಳಲ್ಲಿ ಆದಿಕವಿ ಮಹಷಿ9 ವಾಲ್ಮೀಕಿ ಅಭಿವ್ಯಕ್ತಗೊಳಿಸಿರುವ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿವೆ.ಅವು ಅತ್ಯೋನ್ನತ ಶ್ರೇಷ್ಠತೆಯ ಶ್ರೇಣಿಯಲ್ಲಿ ಕೂಡಿವೆ ಎಂದು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಅಭಿಪ್ರಾಯಿಸಿದರು.          

ಸ್ಥಳೀಯ ಎಂ.ಎಚ್‌.ಎಂ.ಪದವಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ನಿತ್ಯ ವಿನೂತನ ಬದುಕಿನಲ್ಲೂ ಇಂದು ವಾಲ್ಮೀಕಿ ಅವರ ಸ್ವಾಭಿಮಾನದ ವಿಚಾರಧಾರೆಗಳು ಅರ್ಥನೀತಿಯ ನ್ಯಾಯದ ಪರ ನಿಲುವು ತಾಳಿ ಅಜರಾಮರವಾಗಿವೆ.ರಾಮಾಯಣ ಮಹಾಕಾವ್ಯದ ಕಥೆಗಾರನ ಆದರ್ಶಪ್ರಾಯ ಬದುಕು ನಮಗೆಲ್ಲ ಸ್ಪೂತಿ9ಯಾಗಿದೆ. ವಾಲ್ಮೀಕಿ ಅವರ ಬದಕು,ಪಾಂಡಿತ್ಯ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದಾಗಿದೆ. ಆ ಕಾರಣ ಸಕಲ ಧಮಿ9ಯರಿಗೂ ಪೂಜ್ಯನೀಯರಾಗಿ,ವಿಶ್ವಕ್ಕೆ ದಾರೀದೀಪರಾಗಿ ಮಿನುಗಿದ್ದಾರೆ ಎಂದರು.       

ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ವಾಲ್ಮೀಕಿಯವರ ಜೀವನಯಾತ್ರೆ, ಚರಿತ್ರೆ ಸತ್ಯ, ಧರ್ಮ, ಕರುಣೆ ಹಾಗೂ ನ್ಯಾಯದ ಪಥದಲ್ಲಿ ಮೌಲ್ಯಯುತವಾಗಿ ಸಾಗಿವೆ. ಅವರ ಆತ್ಮಶುಧ್ಧಿಯ ತಪಸ್ಸು ಕಾವ್ಯಮಯವಾಗಿ ಫಸರಿಸಿದೆ. ಸಾಮರಸ್ಯದ ತತ್ವ ಸಾರ ಸಮಾಜದಲ್ಲಿ ಮೈದೇಳಿದೆ. ಧರ್ಮದ ತಳಹದಿಮೇಲೆ ಕಾವ್ಯತೃಷೆಗಳು ಜನಮನ ಮುಟ್ಟಿವೆ. ಭಾರತೀಯ ಸಂಸ್ಕೃತಿಯ ಚೇತಕರಾದ ವಾಲ್ಮೀಕಿ ಅವರ ಚಿಂತನೆಗಳಿಗೆ ನಾವೆಲ್ಲರೂ ಬದ್ದತೆಯಿಂದ ಆದ್ಯತೆ ನೀಡಬೇಕು. ವಾಲ್ಮೀಕಿಯವರ ಮೌಲ್ಯ ಭರಿತ ಜೀವನದ ಕಥೆ ಆತ್ಮಾವಲೋಕನ ಮಾಡಿಕೊಂಡು ಅವರ ತತ್ವಾದರ್ಶದ ದಾರಿಯಲ್ಲಿ ಸಾಗಬೇಕು ಎಂದರು.       

ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಮಾತನಾಡಿ, ಶ್ಲೋಕಗಳ ಸಿಂಚನ ಉಣಬಡಿಸಿರುವ ವಾಲ್ಮೀಕಿಯವರು ಅಪ್ರತಿಮ ಕಾವ್ಯಗಾರರು. ಅವರ ಶ್ಲೋಕಗಳು ಸಮಾಜದ ಅಂಕುಡೊಂಕುಗಳಿಗೆ ರಾಮಬಾಣವಾಗಿವೆ. ಅವರ ಬರಹ ಚೈತ್ರದ ಪರಂಪರೆ ಅದಮ್ಯವಾಗಿದೆ.ಜೀವನದ ಧರ್ಮಯಾನಕ್ಕೆ ಮೌಲ್ಯದ ತೋರಣ ಕಟ್ಟಿವೆ. ರಾಮಾಯಣ ಮಹಾಕಾವ್ಯದ ಕೃತಿ ವಿಶ್ವಮಾನ್ಯವಾಗಿದೆ.ಈ ಪವಿತ್ರ ಗ್ರಂಥ ಹೊಂಬೆಳಕಿನ ಕಣ್ಣು ತೆರೆಸಿವೆ. ನಮಗೆಲ್ಲ ಜ್ಞಾನೋದಯದ ಪುಷ್ಟೀಕರಣ ಕರುಣಿಸಿವೆ.ವಾಲ್ಮೀಕಿಯವರ ಸಾಹಿತ್ಯ ಕೊಡುಗೆ ಎಂದೆಂದಿಗೂ ಮರೆಯಲಾಗದು.ಅಷ್ಟೊಂದು ಮಾನನೀಯ ಶ್ರೀಮಂತಿಕೆಯಿಂದ ಕೂಡಿದೆ.ವಾಲ್ಮೀಕಿ ಅವರಲ್ಲಿ ಹುದುಗಿರುವ ಅಮೋಘ ಪ್ರಬುದ್ಧತೆಯೇ ಇವುಗಳಿಗೆಲ್ಲ ಸಾಕ್ಷಿಯಾಗಿದೆ. ಆ ದಿಸೆಯಲ್ಲಿ ಯುವ ವಿದ್ಯಾರ್ಥಿಗಳು ವಾಲ್ಮೀಕಿ ಅವರ ತತ್ವಾದರ್ಶ ಪಾಲಿಸಿ ಸತ್ಯದ ಹಾದಿಯಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದರು.      

 ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜಿಸಲಾಯಿತು. ಎಂ.ಎಚ್‌.ಎಂ.ಪದವಿ ಕಾಲೇಜಿನ ಪ್ರಾಧ್ಯಾಪಕಿ ಅಂಬಿಕಾ ಇಟಗಿ, ರೇಣುಕಾ ಎಂ.ಎಚ್, ಆಶಾ ಬಿರಾದಾರ, ಪ್ರಾಧ್ಯಾಪಕ ಪ್ರಭು ಕಲಗೊಂಡ, ಟಿ.ವಿ.ಮೇಟಿ, ಎಂ.ಎಚ್‌.ಎಂ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕ ಎಚ್‌.ಎನ್‌.ಕೆಲೂರ, ಪ್ರಕಾಶ ಧನಶೆಟ್ಟಿ,  ಎಂ.ಎಸ್‌.ಸಜ್ಜನ, ಟಿ.ಬಿ.ಕರದಾನಿ, ಉಪನ್ಯಾಸಕಿ ಮಮತಾ ಕರೇಮುರಗಿ, ಕರುಣಿಕ ಧನರಾಜ ಸಿಂಗಾರಿ, ಟಿ.ಎಫ್‌.ದಾಸರ, ಗೋಪಾಲ ಬಸಪ್ಪ ಬಂಡಿವಡ್ಡರ ಇತರರಿದ್ದರು.