ಧಾರವಾಡ 03: ಜನಮಾನಸದಲ್ಲಿ ಉಕ್ಕಿನ ಮನುಷ್ಯರೆಂದು ಜನಜನಿತರಾದ ವಲಭ್ಭಾಯಿ ಪಟೇಲರನ್ನು ``ಹಿಮ ಮುಚ್ಚಿದ ಜ್ವಾಲಾಮುಖಿ'' ಎಂದು ಕರೆದದ್ದು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಉಪನ್ಯಾಸಕ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
ಸಂಪಿಗೆ ನಗರದ ಎನ್.ಟಿ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸದರ್ಾರ ಪಟೇಲರ ಜಯಂತ್ಯುತ್ಸವದ ಪ್ರಯುಕ್ತ ಆಚರಿಸಲ್ಪಟ್ಟ `ರಾಷ್ಟ್ರೀಯ ಏಕತಾ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪಟೇಲರು ತಮ್ಮ ಚತುರ ರಾಜನೀತಿ, ರಾಜಕೀಯ ಮುತ್ಸದ್ಧಿತನದಿಂದ ದೇಶದ 562 ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಿದ್ದು ಶ್ಲಾಘನೀಯ. ಅವರಿಗೆ ಬಾಡರ್ೋಲಿ ಹಾಗೂ ಖೇಡಾ ಸತ್ಯಾಗ್ರಹಗಳು ಅಖಿಲ ಭಾರತ ಖ್ಯಾತಿ ತಂದುಕೊಡಲು ಸಹಕಾರಿಯಾಗಿದದ್ದು ಔಚಿತ್ಯವಾಗಿದೆ ಎಂದರು.
ಪ್ರಾಚಾರ್ಯ ಅನುರಾಧಾ ಆರಾಧ್ಯಮಠ ಮಾತನಾಡಿ, ಪಟೇಲರು ಗಾಂಧೀಜಿಯವರಿಂದ ಪ್ರಭಾವಿತರಾದ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ನಾಯಕರು. ರೈತನ ಮಗನಾಗಿ, ರೈತರ ಬಗ್ಗೆ ಅಪಾರ ಆಸಕ್ತಿ ಹೊಂದಿ, ರೈತರಿಂದ `ಸದರ್ಾರ' ಎಂಬ ಗೌರವಕ್ಕೆ ಪಾತ್ರರಾದ ಭಾರತದ ಏಕತಾ ಪುರುಷರು ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಶ್ರೀಧರ ಶಾಸ್ತ್ರಿ ಇನಾಮದಾರ್ ಮಾತನಾಡಿ, ಪಟೇಲರು ತಮ್ಮ ದಿಟ್ಟ ನಿಲುವಿನಿಂದ ಭಾರತದ ಬಿಸ್ಮಾರ್ಕ ಎಂದು ಕರೆಯಿಸಿಕೊಂಡ ಧೀಮಂತರು ಅವರ ಸ್ಮರಣೆ ಭಾರತೀಯರೆಲ್ಲರಿಗೂ ಸ್ಫೂತರ್ಿ ಎಂದು ತಿಳಿಸಿದರು.
ದೀಪ್ತಿ ಕಲಾಲ ಸ್ವಾಗತಿಸಿದರು. ಶರತ್ ಉಪ್ಪಾರ ನಿರೂಪಿಸಿ ವಂದಿಸಿದರು. ಪಟೇಲರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಉಪನ್ಯಾಸಕರಾದ ವಿಜಯಲಕ್ಷ್ಮೀ ಪಾಟೀಲ, ಸಂತೋಷ ಕಲಕೇರಿ, ಮಂಜುನಾಥ ಗೊರವನಕೊಳ್ಳ, ಎಸ್. ಎನ್. ಭಟ್ಟ, ಎಂ. ಬಿ. ಕದಂ, ಎಸ್. ಬಿ. ಕಾಳಗೌಡ್ರ, ಸುನೀಲ ಮೆಣಸಿನಕಾಯಿ ಇದ್ದರು.