ವಾಜಪೇಯಿಗೆ ರಾಷ್ಟ್ರಪತಿ, ಪ್ರಧಾನಿ ಶ್ರದ್ಧಾಂಜಲಿ: ಕವಿತೆ ಮೂಲಕ ಸ್ಮರಿಸಿದ ಬಿಜೆಪಿ

ನವದೆಹಲಿ, ಆ 16       ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ  ವರ್ಷದ ಪುಣ್ಯತಿಥಿ ಅಂಗವಾಗಿ ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪರವಾಗಿ ಗೌರವ ನಮನ ಸಲ್ಲಿಸಿದ್ದಾರೆ. 

ಇಂದು ಬೆಳಗ್ಗೆ ಇಲ್ಲಿರುವ ವಾಜಪೇಯಿ ಅವರ ಸ್ಮಾರಕ 'ಸದವೈ ಅಟಲ್'ಗೆ ನಾಯಕರು ಭೇಟಿ ನೀಡಿದರು. 

ಮಾಜಿ ಪ್ರಧಾನಿ ವಾಜಪೇಯಿ ಅವರು 2018, ಆಗಸ್ಟ್ 16ರಂದು ನಿಧನರಾಗಿದ್ದರು. ಅವರು 2024, ಡಿಸೆಂಬರ್ 25ರಂದು ಜನಿಸಿದ್ದು, ನಿಧನರಾಗುವಾಗ ಅವರಿಗೆ 94 ವರ್ಷ ವಯಸ್ಸಾಗಿತ್ತು. 

ಹಲವು ನಾಯಕರು ದಿವಂಗತ ವಾಜಪೇಯಿ ಅವರ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿರು. 1996ರಲ್ಲಿ 13 ದಿನಗಳ ಕಾಲ ವಾಜಪೇಯಿ ಅವರು ಬಿಜೆಪಿಯ ಮೊದಲ ಪ್ರಧಾನ ಮಂತ್ರಿಯಾಗಿದ್ದರು. ನಂತರ 1998 ಮತ್ತು 2004ರ ನಡುವೆ ಪ್ರಧಾನಿಯಾಗಿದ್ದರು. 

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮತ್ತು ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಕೂಡ ವಾಜಪೇಯಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. 

ಸ್ಮಾರಕದ ಬಳಿಕ ಭಕ್ತಿ ಗೀತೆಗಳನ್ನು ಹಾಡಲಾಯಿತು, ಪ್ರತಿಯೊಬ್ಬರೂ ಅಗಲಿದ ನಾಯಕನನ್ನು ಸ್ಮರಿಸಿದರು.  ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಇತರ ಬಿಜೆಪಿ ನಾಯಕರು ಕೂಡ ಗೌರವ ಸಲ್ಲಿಸಿದ್ದಾರೆ. 

ಅಗಲಿದ ನಾಯಕನಿಗೆ ಅವರೇ ಬರೆದಿದ್ದ ಕವನವನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿ ಗೌರವ ಸಲ್ಲಿಸಿದೆ. 

"ಭಾರತವು ಕೇವಲ ಭೂಮಿ ಅಥವಾ ಗಡಿ ಇರುವ ರಾಷ್ಟ್ರವಲ್ಲ, ಅದು ಜೀವಂತ ರಾಷ್ಟ್ರೀಯವಾದಿ ಆತ್ಮ" ಎಂದು ಟ್ವೀಟ್ ಮಾಡಿದೆ. 

ಪಕ್ಷದ ಅಧಿಕೃತ ಟ್ವಿಟ್ಟರ್ ನಲ್ಲಿ ವಾಜಪೇಯಿ ಅವರು ತಮ್ಮ ವೃತ್ತಿಜೀವನದಲ್ಲಿ ಬರೆದ ಇತರ ಕವಿತೆಗಳನ್ನು ಉಲ್ಲೇಖಿಸಲಾಗಿದೆ.