ನವದೆಹಲಿ 17: ಭಾರತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಗೌರವಾರ್ಥವಾಗಿ ನವ ದೆಹಲಿಯ ಬ್ರಿಟಿಷ್ ಹೈ ಕಮಿಷನರ್ಕಚೇರಿಯಲ್ಲಿ ಯೂನಿಯನ್ ಜ್ಯಾಕ್ (ಬ್ರಿಟೀಷ್ ಧ್ವಜ) ಅನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗಿದೆ. ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ 93 ರ ಹರೆಯದ ವಾಜಪೇಯಿ ಗುರುವಾರ ಸಂಜೆ ಕೊನೆಯುಸಿರೆಳೆದಿದ್ದರು.
ವಾಜಪೇಯಿಯವರ ಶವ ಸಂಸ್ಕಾರವನ್ನು ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಿಸಲಾಗಿದು ಬಿಜೆಪಿ ಪ್ರಧಾನ ಕಛೇರಿಯಿಂದ ಅಂತಿಮ ಯಾತ್ರೆ ಪ್ರಾರಂಭವಾಗಿತ್ತು.ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಇತರ ಪಕ್ಷದ ಸದಸ್ಯರು ಸಹ ಮೆರವಣಿಗಯಲ್ಲಿ ಪಾಲ್ಗೊಂಡಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಾಜಪೇಯಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದರು.
ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕಝರ್ಾಯಿ ಶ್ರೀಲಂಕಾದ ಉಮೇದುವಾರಿ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರಿಲ್ಲಾ ಮತ್ತು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯವಾಲಿ ಹಾಗೂ ಭೂತಾನ್ ರಾಜ ಜಿಗ್ಮೆ ಖೇಸರ್ ನಂಗ್ಯಾಲ್ ವಾಂಗ್ಚುಕ್ ಸೇರಿ ಅನೇಕ ವಿದೇಶೀ ಗಣ್ಯರು ಸಹ ವಾಜಪೇಯಿಯವರ ಅಂತಿಮ ದರ್ಶನ ಪಡೆದಿದ್ದಾರೆ.