ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ಎರಡು ದಿನಗಳು ಮಾತ್ರ

ತಿರುಮಲ, ಡಿ ೧೯ ಈ  ಬಾರಿ  ತಿರುಪತಿ ತಿಮ್ಮಪ್ಪನ  ವೈಕುಂಠ  ದ್ವಾರ  ದರ್ಶನ ಎರಡು ದಿನಗಳು ಮಾತ್ರ ಎಂದು  ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಅಧ್ಯಕ್ಷ  ವೈ.ವಿ.ಸುಬ್ಬಾರೆಡ್ಡಿ   ಸ್ಪಷ್ಟಪಡಿಸಿದ್ದಾರೆ. ಈ ಮೊದಲು  ಯೋಜಿಸದಂತೆ ೧೦ ದಿನಗಳಕಾಲ ನಡೆಸಲು ಸಾಧ್ಯವಿಲ್ಲ ಎಂದು  ಅವರು  ತಿಳಿಸಿದರು. ತಿರುಮಲಕ್ಕೆ ಆಗಮಿಸಿದ ವಿಶಾಖ ಶ್ರೀ ಶಾರದ ಪೀಠದ  ಮುಖ್ಯಸ್ಥ ಸ್ವರೂಪಾನಂದ ಸ್ವಾಮಿಜೀಯನ್ನು   ಟಿಟಿಡಿ ಅಧ್ಯಕ್ಷರು,  ದೇವಾಲಯದ ಪ್ರಧಾನ ಅರ್ಚಕರು   ಭೇಟಿಮಾಡಿದರು.  ಈ ಸಂದರ್ಭದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.   ಈ ಸಂದರ್ಭದಲ್ಲಿ  ಮಾತನಾಡಿದ  ಸುಬ್ಬಾರೆಡ್ಡಿ, ವೈಕುಂಠ ಏಕಾದಶಿಯ  ಸಂದರ್ಭದಲ್ಲಿ  ಎರಡು ದಿನಗಳು  ಮಾತ್ರ  ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಮತ್ತೊಂದೆಡೆ,  ಉತ್ಸವ ಮೂರ್ತಿಗಳು   ಸವಕಳಿಯಾಗುತ್ತಿರುವ ಅಂಶವನ್ನು ಸ್ವಾಮೀಜಿಯ ಗಮನಕ್ಕೆ   ಪುರೋಹಿತರು ತಂದರು, ಐತಿಹಾಸಿಕ ದೇವಾಲಯಗಳಲ್ಲಿ  ಅನುಸಿರಿಸುವ ವಿಧಾನ ಪರಿಶೀಲಿಸಿ  ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ  ಸ್ವಾಮೀಜಿ  ಸಲಹೆ ನೀಡಿದ್ದಾರೆ  ಎಂದು ತಿಳಿಸಿದರು. ಹಿಂದೂ ಧರ್ಮ ಪ್ರಚಾರದ  ಭಾಗವಾಗಿ  ಪ್ರತಿ ತಿಂಗಳು ಟಿಟಿಡಿ  ವಿಶೇಷ ಕಾರ್ಯಕ್ರಮ  ಆಯೋಜಿಸಲಿದೆ ಎಂದು ಸುಬ್ಬಾರೆಡ್ಡಿ ಹೇಳಿದರು. ವಿಶಾಖ ಶ್ರೀ ಶಾರದ ಪೀಠದ  ಮುಖ್ಯಸ್ಥ ಸ್ವರೂಪಾನಂದೇಂದ್ರ  ಸರಸ್ವತಿ,  ಉತ್ತರಾಧಿಕಾರಿ ಸ್ವಾತ್ಮಾನಂದೇಂದ್ರ ಸರಸ್ವತಿ ಬುಧವಾರ ರಾತ್ರಿ ತಿರುಮಲಕ್ಕೆ  ಆಮಿಸಿದ್ದರು.  ರಾಜ್ಯ ಹಣಕಾಸು ಸಚಿವ ಬುಗ್ಗನ ರಾಜೇಂದ್ರನಾಥ ರೆಡ್ಡಿ, ಟಿಟಿಡಿ ಮಂಡಳಿ ಸದಸ್ಯ ಚೆವಿರೆಡ್ಡಿ ಭಾಸ್ಕರ ರೆಡ್ಡಿ, ವಿಶೇಷ ಆಹ್ವಾನಿತ ಶೇಖರ್ ರೆಡ್ಡಿ,  ಸ್ವಾಮೀಜಿಗಳನ್ನು ಭೇಟಿ ಮಾಡಿ  ಆರ್ಶಿವಾದ ಪಡೆದುಕೊಂಡರು. ಸ್ವಾಮೀಜಿಗಳು  ಈ ತಿಂಗಳ ೨೧ ರವರೆಗೆ ತಿರುಮಲದಲ್ಲಿ ಉಳಿದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.