ವಿಶ್ವಕರ್ಮ ವಧು ವರರ ಪುಸ್ತಕ ಬಿಡುಗಡೆ

ಹುಬ್ಬಳ್ಳಿ : ವಿಶ್ವಕರ್ಮ ವಧು ವರರ ಪುಸ್ತಕವನ್ನು ಶನಿವಾರ ದಿನಾಂಕ: 04/07/2020 ರಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಇವರು ತಮ್ಮ ಕಚೇರಿಯಲ್ಲಿ ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ನಿವೃತ್ತ ಪೊಲೀಸ್ ಅಧಿಕಾರಿ ಎ.ಆರ್. ಬಡಿಗೇರ, ಅಖಿಲ ಭಾರತೀಯ ವಿಶ್ವಕರ್ಮ ಛಾತ್ರ ಯುವ ಸಂಘ ದೆಹಲಿಯ ರಾಷ್ಟ್ರೀಯ ಅಧ್ಯಕ್ಷರಾದ ಸಂತೋಷ ಭಿ ಬಡಿಗೇರ, ದಕ್ಷಿಣ ಭಾರತ ಹಿಂದು ಪ್ರಚಾರಕ ಸಮಿತಿಯ ಅಧ್ಯಕ್ಷರು ವೀರೇಶ ಅಂಚಟಗೇರಿ. ಸಮಗ್ರ ಕನರ್ಾಟಕ ಶ್ರೀ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷರು ಶ್ರೀಮತಿ ಸುವರ್ಣ ಪತ್ತಾರ, ರಾಜ್ಯ ಕಾರ್ಯದಶರ್ಿ ಶ್ರೀಮತಿ ವೈಶಾಲಿ ಸುತಾರ, ಗುರುನಾಥ ಪತ್ತಾರ, ಮಂಜುನಾಥ ಪಿ. ಬಡಿಗೇರ, ಸತೀಶ ಪತ್ತಾರ, ಅಭಿಲಾಷ ಬಡಿಗೇರ ಉಪಸ್ಥಿತರಿದ್ದರು.