ನಿಖಿಲ್ ನಿಶ್ಚಿತಾರ್ಥಕ್ಕೆ ವಿವಿಐಪಿ ಮೆರಗು: ಗಮನ ಸೆಳೆದ ವೈವಿದ್ಯಮಯ ಅಡುಗೆ

ಬೆಂಗಳೂರು, ಫೆ 10, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್ ಯುವಘಟಕ ಅಧ್ಯಕ್ಷ, ಸ್ಯಾಂಡಲ್‌ವುಡ್ ನಟ ನಿಖಿಲ್‌ ಕುಮಾರಸ್ವಾಮಿ ಅವರ ವಿವಾಹ ನಿಶ್ಚಿತಾರ್ಥ ರೇವತಿ ಅವರೊಂದಿಗೆ ಸಂಪ್ರದಾಯಬದ್ಧವಾಗಿ ಅದ್ಧೂರಿಯಾಗಿ ನೆರವೇರಿತು.ನಿಶ್ಚಿತಾರ್ಥಕ್ಕೆ ವಿವಿಐಪಿ ಮೆರಗು ಬಂದಿದ್ದು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಶಾಸ್ತ್ರೋಕ್ತವಾಗಿ ಶುಭ ಸಮಾರಂಭ ಜರುಗಿತು. 

ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ, ಅನಸೂಯ ಮತ್ತು ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲ ಶಾಸ್ತ್ರೋಕ್ತವಾಗಿ ಭಾವಿ ವಧು ವರರರು ಪರಸ್ಪರ ಉಂಗುರ ಹಾರ ಬದಲಾಯಿಸಿಕೊಂಡರು. ನಿಶ್ಚಿತಾರ್ಥಕ್ಕೂ ಮುನ್ನ ಮನೆಯಲ್ಲಿ ನಿಖಿಲ್ ತಂದೆ ತಾಯಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ವೈಭೋಗದ ನಿಶ್ಚಿತಾರ್ಥಕ್ಕೆ  ರಾಜಕೀಯ ಮುಖಂಡರು, ಚಿತ್ರರಂಗದ ಗಣ್ಯರು, ನಿಖಿಲ್‌ ಆಪ್ತರು ಆಗಮಿಸಿ, ನವಜೋಡಿಗೆ ಶುಭ ಹಾರೈಸಿದರು. ನಿಶ್ಚಿತಾರ್ಥಕ್ಕೆ ಪವರ್​ಸ್ಟಾರ್​ ಪುನೀತ್ ಸಹ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷವಾಗಿತ್ತು.ಈ ಅದ್ದೂರಿ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ ಅತಿಥಿಗಣ್ಯರು ಕುಮಾರಸ್ವಾಮಿ ಹಿತೈಷಿಗಳು ಅಡುಗೆ ಪಟ್ಟಿಗೆ ಮನಸೋತರು. ತರಾವರಿ ಭಕ್ಷ್ಯಗಳನ್ನು ಸೇವಿಸಿ ಬಾಯಿಚಪ್ಪರಿಸಿ ಭಲೇ ಎಂದರು.

ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನ ಎಲ್ಲರಿಗೂ ಒಂದೇ ರೀತಿಯ ಅಡುಗೆಯನ್ನು ಮಾಡಿಸಲಾಗಿದ್ದು, ಕರ್ನಾಟಕ ಶೈಲಿಯ 50 ರೀತಿಯ ಖಾದ್ಯಗಳು ಇಲ್ಲಿದ್ದವು. ವೆಲ್‌ಕಮ್‌ ಡ್ರಿಂಕ್‌ಗೆ ಎಳನೀರು, ಮಜ್ಜಿಗೆ, ಕ್ರೆನ್ಬೆರಿ ಕೂಲರ್, ಹರಭರ ಕೆಬಾಬ್‌, ವೆಜಿಟಬಲ್‌ ಸ್ಪ್ರಿಂಗ್ ರೋಲ್ಸ್, ಮಿಕ್ಸ್ಡ್ ವೆಜಿಟಬಲ್ ಸಲಾಡ್‌, ಚಿಲಿ ಪನೀರ್ ನೀಡಲಾಯಿತು. 

ನಂತರ ಚಟ್‌ಪಟ ಗ್ರೀನ್ ಸಲಾಡ್‌, ಕೊಸಂಬರಿ, ಚನ್ನಾ ಜೋರ್ ಗರಂ, ಡ್ರೈ ಪ್ರ್ಯೂಟ್ ಮಿಕ್ಸ್ಚರ್‌, ಮಾವಿನಕಾಯಿ ಉಪ್ಪಿನಕಾಯಿ, ಕರ್ಡ್‌ ಚಿಲಿ, ಹಪ್ಪಳ, ಸಂಡಿಗೆ, ಚಟ್ನಿ, ಪುದಿನಾ ಚಟ್ನಿ, ಕರ್ಡ್ ರೈಸ್‌ , ಊಟಕ್ಕೆ ಕ್ಯಾರೆಟ್‌, ಬೀನ್ಸ್ ಪಲ್ಯ, ಕಾಳು ಫ್ರೈ, ಪೈನಾಪಲ್‌ ಗೊಜ್ಜು, ಪನ್ನೀರ್ ಪೇಶಾವರಿ, ಥಾಯ್‌ ವೆಜಿಟಬಲ್‌ ಗ್ರೀನ್‌ ಕರಿ, ಕಾರ್ನ್ ಕ್ಯಾಪ್ಸಿಕಂ ಮಸಾಲ, ಪಟೋಟೋ ಪೆಪ್ಪರ್ ಫ್ರೈ ಪುಳಿಯೋಗರೆ, ಜೀರಾ, ಅನ್ನ-ಸಾಂಬಾರ್‌, ಕೇರಳ ಪರೋಟ. ಊಟದ ನಂತರ ಡ್ರೈ ಫ್ರೂಟ್‌ ಪಾಯಸ, ಮೈಸೂರು ಪಾಕ್‌, ಹನಿ ಐಸ್ ಕ್ರೀಮ್‌, ಮೂಂಗ್ ದಾಲ್‌ ಹಲ್ವಾ ಇನ್ನೂ ಹಲವು ಇದ್ದವು.

ಚಟ್‌ಪಟ ಗ್ರೀನ್ ಸಲಾಡ್‌, ಕೊಸಂಬರಿ, ಚನ್ನಾ ಜೋರ್ ಗರಂ, ಡ್ರೈ ಪ್ರ್ಯೂಟ್ ಮಿಕ್ಸ್ಚರ್‌, ಮಾವಿನಕಾಯಿ ಉಪ್ಪಿನಕಾಯಿ, ಕರ್ಡ್‌ ಚಿಲಿ, ಹಪ್ಪಳ, ಸಂಡಿಗೆ, ಚಟ್ನಿ, ಪುದಿನಾ ಚಟ್ನಿ, ಕರ್ಡ್ ರೈಸ್‌  ಕ್ಯಾರೆಟ್‌, ಬೀನ್ಸ್ ಪಲ್ಯ, ಕಾಳು ಫ್ರೈ, ಪೈನಾಪಲ್‌ ಗೊಜ್ಜು, ಪನ್ನೀರ್ ಪೇಶಾವರಿ ಜಿಹ್ಯಾ ಚಾಪಲ್ಯ ತಣಿಸಿತು.ನಿಶ್ಚಿತಾರ್ಥಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ "ತಮ್ಮ ಜೀವನದ ಮೊದಲನೇ ಅಧ್ಯಾಯ ಪ್ರಾರಂಭಿಸುತ್ತಿದ್ದು ಕೃಷ್ಣಪ್ಪ ಹಾಗೂ ತಮ್ಮ ಈ ಎರಡು ಕುಟುಂಬಗಳು ಸೇರಿ ನನ್ನ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಮೊದಲನೇ ಹೆಜ್ಜೆ ಇಡುತ್ತಿದ್ದೇವೆ. ಹಾಗಾಗಿ ರಾಜ್ಯದ ಜನತೆಯ ಆಶೀರ್ವಾದ ಅಗತ್ಯ ಎಂದರು.