ಮಾಂಜರಿ 11: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಶನಿವಾರರಂದು ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ರಾಜಾರಾಮ್ ಅಪ್ಪು ಮನೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಗರ್ ಅವರಾದೆ ನಾಪಪತ್ರ ಸಲ್ಲಿಸಿದರು.
ಪ್ರತಿಯಾಗಿ ಯಾವುದೇ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಅಧ್ಯಕ್ಷರಾಗಿ ರಾಜಾರಾಮ್ ಮನೆ ಉಪಾಧ್ಯಕ್ಷರಾಗಿ ಸಾಗರ್ ಅವರದೆ ಆಯ್ಕೆಯಾದರು. ಎಂದು ಚುನಾವಣಾ ಅಧಿಕಾರಿಗಳಾದ ಚಿಕ್ಕೋಡಿಯ ಸಹಕಾರ ಇಲಾಖೆಯ ಬಿಎಸ್ ಪೂಜಾರಿ ಘೋಷಿಸಿದರು ನೂತನವಾಗಿ ಆಯ್ಕೆಯಾದೆ ರಾಜಾರಾಮ್ ಮನೆ ಮಾತನಾಡಿ, ನಮ್ಮ ಸಂಘವು ಹಿಂದೆ 2 ಸಾವಿರದ ಶೇರ್‌ನಿಂದ ಪ್ರಾರಂಭವಾದ ಸಂಸ್ಥೆ ಇಂದಿನ 20 ಕೋಟಿಗಿಂತ ಹೆಚ್ಚು ವ್ಯವಹಾರ ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೆ ಆಡಳಿತ ವರ್ಗ ಮಾಡಿದ ಪರಿಶ್ರಮವೇ ಇದಕ್ಕೆ ಕಾರಣ. ಮುಂದೆ ಕೂಡಾ ಹೊಸ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ರೈ
ತರಿಗೆ ಅನುಕೂಲವಾಗುವ ರೀತಿಯಲ್ಲಿ ತಾವು ಗಳು ಕೆಲಸ ಮಾಡಬೇಕು ಅದೇ ಪ್ರಕಾರ ನಮ್ಮ ಹಿರಿಯರಾದ ಮತ್ತು ಸಂಘದ ಮಾರ್ಗದರ್ಶಕರಾದ ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ್ ಕೋರೆ ಗಣೇಶ ಹುಕ್ಕೇರಿ ಮತ್ತು ಪ್ರಕಾಶ್ ಹುಕ್ಕೇರಿ ಇವರ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಎಂದು ತಿಳಿಸಿದರು. ಈ ವೇಳೆ ಸಂಘದ ನಿರ್ದೇಶಕರಾದ ಅಣ್ಣಾಸಾಹೇಬ್ ಜಾಧವ್ ಹೂವನ್ನ ಚೌಗುಲೆ ಶುಭಾಶಯಗಳು ತೇಜಶ್ರೀ ಮದವಾವಿ ರಾಮಜಿ ಕಾಂಬಳೆ ಅಜಿತ್ ಕುಮಾರ್ ಚೀಗರೇ ಹಾಗೂ ಗ್ರಾಮದ ಮುಖಂಡರಾದ ಅಪ್ಪಸಾಹೇಬ್ ಜಾತ್ರಾಟಿ ಸುಭಾಷ್ ಜುಗಳೆ ಗಣಪತಿ ಧನವಾಡೆ ರಮೇಶ್ ಮೂರ್ಚಿಟ್ಟಿ ಅಶೋಕ್ ಬಾಮನೆ ಬಾಬಾಸಾಹೇಬ್ ಧಾಬಡೆ
ಅಣ್ಣಸಾಹೇಬ್ ಡಿಗ್ರಜೆ ಸಂಜೆಯ ಕುಡಚೀ ಪ್ರಕಾಶ್ ಚಿಗರೆ ಪುಂಡಲೀಕ್ ಧನವಾಡೆ ನಾವು ಇನ್ನೇತರರು ಹಾಜರಿದ್ದರು ಗ್ರಾಮದ ಹಿರಿಯರ ಮುಖಂಡರಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು
ನಮ್ಮ ಸಂಘವು ಮೊದಲಿನಿಂದಲೂ ರೈತರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತ ಬಂದಿದ್ದು, ಮುಂದೆ ಕೂಡ ಕೆಲಸ ಮಾಡುತ್ತಾರೆ ಎಂದು ವಿಶ್ವಾಸವಿದೆ. ಸಿ
ರಾಜಾರಾಮ್ ಮಾನೆ ನೂತನ ಅಧ್ಯಕ್ಷ