ಬೆಳಗಾವಿ, 11: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18 ನೇ ವಾಷರ್ಿಕ ಘಟಿಕೋತ್ಸವವನ್ನು 2019 ಮಾಚರ್್ 18 ರಂದು ಬೆಳಗ್ಗೆ 10 ಗಂಟೆಗೆ ವಿಟಿಯುನ ಜ್ಞಾನಸಂಗಮ ಅವರಣದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಹೇಳಿದರು.
ಸೋಮವಾರದಂದು ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಘಟಿಕೋತ್ಸವಕ್ಕೆ ಘನತೆವೆತ್ತ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯ ನಾಯ್ಡು ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು, ಕನರ್ಾಟಕ ಸರಕಾರದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಟಿಯುನ ಕುಲಾಧಿಪತಿಗಳಾದ ವಜುಬಾಯಿ ಆರ್ ವಾಲಾ ಅವರು ಅಧ್ಯಕ್ಷತೆ ವಹಿಸುವರು ಹಾಗೂ ಪದವಿ ಪ್ರದಾನ ಮಾಡುವರು,
ಕನರ್ಾಟಕ ಸಕರ್ಾರದ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ವಿಟಿಯುನ ಎಲ್ಲ ಸಮಕುಲಾಧಿಪತಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ಹೇಳಿದರು.
ದಾವಣಗೆರೆಯ ಜೈನ್ ಇಂಜಿನಿಯರಿಂಗ್ ಆಪ್ ಟೆಕ್ನಾಲಜಿ ಕಾಲೇಜಿನ ಅಂತಿಮ ವರ್ಷದ ವಿದ್ಯಾಥರ್ಿನಿ ಸುಚಿತ್ರಾ.ಎನ್ ಎಂಬವರು ಡಿಡಿರಚಿಣಠಟಿ ಜಟಿರಟಿಜಜಡಿಟಿರ ಮತ್ತು ಊಥಿಜಡಿಚಿಣಟಛಿ ಣಡಿಣಛಿಣಣಡಿಜ ಎನ್ನುವ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಒಟ್ಟು 9 ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಖ್ಯಾತ ಅಭಿಯಂತರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಬಿ. ಗಿರೀಶ್ ಭಾರದ್ವಾಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
418 ಪಿಎಚ್ಡಿ ಪ್ರಧಾನ:
ವಿಶ್ವ ವಿದ್ಯಾಲಯದ 18 ನೇ ಘಟಿಕೋತ್ಸವದಲ್ಲಿ ಯರ್ಾಂಕ ಪಡೆದ ಆಯಾ ವಿಬಾಗದ ವಿದ್ಯಾಥರ್ಿಗಳಿಗೆ ಬಂಗಾರದ ಪದಕ ನಿಡಲಾಗುವದು ಅವರುಗಳ ವಿವರ 64581 ಬಿ ಇ, 619 ಬಿ. ಆಕರ್ಿಟೆಕ್ಚರ್ , 4425 ಎಮ್ ಬಿ ಎ, 1801 ಎಂಎಸ್ಸಿ, 2859 ಎಂ.ಟೆಕ್, 26 ಎಂ. ಆಕರ್ಿಟೆಕ್ಚರ್, 418 ಪಿಎಚ್ ಡಿ ಹಾಗೂ 33 ಎಂ.ಎಸ್ಸಿ ಎಂಜಿನಿಯರಿಂಗ್ ವಿದ್ಯಾಥರ್ಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುವದು ಎಂದರು.
ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾಥರ್ಿಗಳು, ಪಾಲಕರು, ಹಾಗೂ ಆಹ್ವಾನಿತರಿಗೆ ಮಾಚರ್್ 18 ರಂದು ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ಬೆಳಗ್ಗೆ 6ರಿಂದ ಸಂಜೆ 8 ಗಂಟೆಯ ವರೆಗೆ ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕುಲಪತಿ ಡಾ. ಕರಿಸಿದ್ದಪ್ಪ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಟಿಯುನ ಪ್ರಭಾರಿ ಮೌಲ್ಯಮಾಪನ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.