ಮತದಾರರ ಯಾದಿ ವಿಶೇಷ ಪರಿಷ್ಕರಣೆ ಕಾರ್ಯ ಪ್ರಗತಿ ಪರಿಶೀಲನೆ ಮಾಡಿದ ವಿ. ಪೊನ್ನುರಾಜ್

ಧಾರವಾಡ 10: ಮತದಾರ ಯಾದಿಯ ವಿಶೇಷ ಪರಿಷ್ಕರಣೆ-2020 ಕ್ಕೆ ಸಂಬಂಧಿಸಿದಂತೆ ಕರಡು ಮತದಾರ ಯಾದಿಯ ಕುರಿತು ಇಂದು ಸಂಜೆ ಮತದಾರ ಯಾದಿ ಪರಿಷ್ಕರಣೆಯ ವೀಕ್ಷಕರು ಹಾಗೂ ಕನರ್ಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿದರ್ೇಶಕರಾದ ವಿ.ಪೊನ್ನುರಾಜ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಮಾಡಿ, ಅಧಿಕಾರಿಗಳೊಂದಿಗೆ ಚಚರ್ಿಸಿದರು.

ಅವರು ಮಾತನಾಡಿ, ನವ ಮತದಾರ ಸೇರ್ಪಡೆ, ಫ್ಯಾಮಿಲಿ ಟ್ಯಾಗಿಂಗ್, ಎಪಿಕ್ಕಾಡರ್್ ವಿತರಣೆ ಸೇರಿದಂತೆ ಎಲ್ಲ ಕಾರ್ಯಗಳನ್ನು ವಿಳಂಬವಾಗದಂತೆ ಪೂರ್ಣಗೊಳಿಸಬೇಕು.

ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬ ವಯಸ್ಕ ನಾಗರಿಕನು ಮತದಾರ ಯಾದಿಗೆ ಸೇರ್ಪಡೆಗೊಳ್ಳಬೇಕು. ಮನೆ ಮನೆ ಭೇಟಿ ನೀಡಿ ಮತದಾರ ಯಾದಿ ಪೂರ್ಣವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು.

ಮತಗಟ್ಟೆ ಮೇಲ್ವಿಚಾರಕರು ಸರಿಯಾಗಿ ಉಸ್ತುವಾರಿ ಮಾಡಬೇಕೆಂದು ತಿಳಿಸಿದರು. ಮತದಾರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರ ನೊಂದಣಿ ಅಧಿಕಾರಿಗಳು ಮತಗಟ್ಟೆಗೆ ನಿರಂತರ ಭೇಟಿ ನೀಡಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಾತನಾಡಿ, ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 1634 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಒಬ್ಬರಂತೆ 1634 ಬಿಎಲ್ಓ ಗಳನ್ನು ಮತ್ತು 163 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಮತಗಟ್ಟೆ  ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಉಸ್ತುವಾರಿಗಳಿಗೆ ಅಗತ್ಯ ತರಬೇತಿಯನ್ನು ಕಾಲಕಾಲಕ್ಕೆ ನೀಡಲಾಗಿದ್ದು, ಸಮರ್ಪಕವಾಗಿ ಕಾರ್ಯನಿಹರ್ಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ ಹಾಗೂ ತಹಶಿಲ್ದಾರರು ಅಗತ್ಯ ಮಾಹಿತಿಯನ್ನು ವಿವರಿಸಿದರು.

ಸಭೆಯಲ್ಲಿ ಮತದಾರರ ನೊಂದಣಿ ಅಧಿಕಾರಿಗಳು, ಸಹಾಯಕ ಮತದಾರ ನೊಂದಣಿ ಅಧಿಕಾರಿಗಳು ಭಾಗವಹಿಸಿದ್ದರು.