ಲೋಕದರ್ಶನ ವರದಿ
ಬೆಳಗಾವಿ, 19: ವಿದ್ಯಾಥರ್ಿಗಳಿಗೆ ಅಧ್ಯಯನದೊಂದಿಗೆ ಪಠ್ಯೇತರ ಚಟುವಟಿಕೆ ಅತ್ಯಗತ್ಯ, ಕ್ರೀಡೆಯಿಂದ ವಿದ್ಯಾಥರ್ಿಗಳಿಗೆ ಸದೃಡವಾದ ಹೃದಯ, ಮನಸ್ಸು, ಕಾಯಕ ಸಿಕ್ಕಂತಾಗುತ್ತದೆ. ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳು ಕ್ರೀಡೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಾನಂದ ಹೊಸಮನಿ ಹೇಳಿದರು.
ನಗರದ ಜಿಲ್ಲಾ ಕ್ರೀಂಡಾಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಶನಿವಾರ 18 ರಂದು ಆಯೋಜಿಸಲಾಗಿದ್ದ, ಸ್ನಾತಕೋತ್ತರ ವಿದ್ಯಾಥರ್ಿ ಒಕ್ಕೂಟ, ಕ್ರೀಡಾ ಸ್ಪಧರ್ೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು.
ಸುಮಾರು 40 ವರ್ಷಗಳಿಂದ ವಿವಿಧ ಕ್ರೀಡೆ ಭಾಗವಹಿಸಿ ವಿದ್ಯಾಥರ್ಿಗಳಿಗೆ ಕೂಡ ಮಾರ್ಗದರ್ಶನ ನೀಡಲಾಗಿದೆ. ಕ್ರೀಡೆ ಪ್ರತಿಯೊಬ್ಬರ ಜಿವಾಳ ಆಗಬೇಕು.
ಕ್ರೀಡೆಯನ್ನು ಅಭಿಮಾನ, ಪ್ರೀತಿಯಿಂದ ಬಹಿಸಿದರೆ, ಅದೂ ನಮಗೆ ಶ್ರೇಷ್ಠವಾದ ಜೀವನವನ್ನು ನೀಡುತ್ತದೆ. ಕ್ರೀಡೆಯಲ್ಲಿ ತುಂಬಿದ ಯವನ, ತೆಜಸ್ಸು ಉಪ್ಪಾದರೂ ತಿರುವುದಿಲ್ಲವೆಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಸಕಲವಾದ ಕಾಯವನ್ನು ಹೊಂದಬೇಕಾದರೆ ಕ್ರೀಡೆ ಅವಶ್ಯ, ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಭಾರತ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಬೇಕು.
ಮಲಪ್ರಭಾ ಜಾಧವ ಭಾರತ ದೇಶದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಿದ್ದಾರೆ. ಪ್ರತಿಯೊಂದು ಹಂತದಲ್ಲಿ ವಿದ್ಯಾಥರ್ಿನಿಯರು ಮೆಲುಗೈ ಸಾಧಿಸುತ್ತಾರೆ. ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. 2018-19 ರ ಪಿಯು, ಎಸ್ಎಸ್ಎಲ್ಸಿ ಪಲಿತಾಂಶದಲ್ಲೂ ಮಹಿಳೆಯರು ಮೆಲಗೈ ಸಾಧಿಸಿದ್ದಾರೆ ಎಂದರು.
ಪ್ರತಿಯೊಬ್ಬರಲ್ಲಿ ಕ್ರೀಡಾ ಪತ್ರಿಭೆ ಅಡಗಿರುತ್ತದೆ, ಅಂತಹ ವ್ಯಕ್ತಿಗಳಿಗೆ ಕೈಜೋಡಿಸಿ ವಿದೇಶದಲ್ಲಿ ವಿಂಚುವ ಹಾಗೇ ಪ್ರೋತ್ಸಾಹ ನೀಡಬೇಕೆಂದರು.
15 ಜೂನ್ ನಂತರ ನಿರ್ಗಮಿಸಲಿದ್ದೆನೆ. ವಿದ್ಯಾಥರ್ಿಗಳ ಜೊತೆ ಕೊನೆಯ ಕ್ರೀಡಾಕೂಟ ಆಗಿರಬಹುದು, ವಿದ್ಯಾಥರ್ಿಗಳು ಸಾಕಷ್ಟೂ ಸ್ಪಂಧಿಸಿದ್ದಾರೆ ಎಂದು ಹೇಳಿ ಭಾವುಕರಾದರು. ವಿದ್ಯಾಥರ್ಿಗಳು ಸಹಕಾರ ನೀಡಿದರೆ ವಿಶ್ವವಿದ್ಯಾಲಯಗಳು ಬೆಳೆಯುತ್ತದೆ. ಸದಾಕಾಲ ರಾಣಿ ಚನ್ನಮ್ಮ ವಿಶ್ವವಿದ್ಯಾಯಲದ ಜ್ಯೋತಿ ಬೆಳಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದು.
ಈ ಸಂದರ್ಭದಲ್ಲಿ ಪ್ರೋ. ಸಿದ್ದು ಅಲಗೂರ್, ಡಾ.ಕಾಂತರಾಜು .ಕೆ, ಮಂಜುನಾಥ ಕೆ. ನಾಗರತ್ನಾ ಪರಾಂಡ್ಯೆ ಹಾಗೂ ಶಿಕ್ಷಕರು, ವಿದ್ಯಾಥರ್ಿ-ವಿದ್ಯಾಥರ್ಿನಿಯರು ಹಾಗೂ ಉಪಸ್ಥಿತರಿದ್ದರು.