ಬೆಂಗಳೂರು/ಹೈದರಾಬಾದ್, ಫೆ 14, ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದೆ. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಚಿತ್ರತಂಡ ರೋಮ್ಯಾಂಟಿಕ್ ಟೀಸರ್ ರಿಲೀಸ್ ಮಾಡಿದೆ. ಇದು ಚಿತ್ರದ ಹಾಡಿನ ಟೀಸರ್ ಆಗಿದ್ದು, ಸಾಯಿ ಮತ್ತು ನಾಗ್ ಇಬ್ಬರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ರೋಮ್ಯಾಂಟಿಕ್ ಟೀಸರ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್ ಪುಟ್ಟದಾಗಿ ಸಿಂಪಲ್ ಆಗಿದ್ದರು ಅಭಿಮಾನಿಗಳ ಹೃದಯ ಗೆದ್ದಿದ್ದು, ಚಿತ್ರ ಬಿಡುಗಡೆಯ ದಿನವನ್ನು ಎದುರುನೋಡುತ್ತಿದ್ದಾರೆ. `ಲವ್ ಸ್ಟೋರಿ’ ಗೆ ನಿರ್ದೇಶಕ ಶೇಖರ್ ಕಮ್ಮುಲಾ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಸಾಯಿ ಪಲ್ಲವಿ ಜೊತೆ 'ಫಿದಾ' ಸಿನಿಮಾ ಮಾಡಿದ್ದ ಶೇಖರ್ ಕಮ್ಮುಲಾ ಎರಡನೆ ಬಾರಿಗೆ ಸಾಯಿ ಪಲ್ಲವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ಲ್ಲಿ ಬರ್ತಿರುವ 'ಲವ್ ಸ್ಟೋರಿ' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.