ನವದೆಹಲಿ, ಮೇ 14, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರನ್ನಾಗಿ ಹಿರಿಯ ಐ ಎ ಎಸ್ ಅಧಿಕಾರಿ ವಿ ವಿದ್ಯಾವತಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ವಿ. ವಿದ್ಯಾವತಿ ಅವರು 1991ನೇ ತಂಡದ ಐಎಎಸ್ (ಭಾರತೀಯ ಆಡಳಿತ ಸೇವೆಯ) ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದಾರೆ. ಸಂಪುಟ ನೇಮಕಾತಿಗಳ ಸಮಿತಿ ಮಂಗಳವಾರ ಈ ನೇಮಕಾತಿ ಯನ್ನುಅಂತಿಮಗೊಳಿಸಿದೆ.ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾವತಿ ಅವರು ನೂತನ ಹುದ್ದೆ ಅಧಿಕಾರವನ್ನು ಇನ್ನೂ ಸ್ವೀಕರಿಸಬೇಕಿದೆ.