ಲಕ್ನೋ : ಉತ್ತರ ಪ್ರದೇಶದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ 14 ಮಂದಿ ಮೃತಪಟ್ಟ ಇತರ 7 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಜಡಿಮಳೆ, ನೆರೆ, ಭೂಕುಸಿತ ಇತ್ಯಾದಿ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ ಫಾರೂಕಾಬಾದ್ ಮತ್ತು ಬಹರೇಚ್ ನಲ್ಲಿ ತಲಾ ಇಬ್ಬರು ಮೃಪಟ್ಟಿದ್ದಾರೆ; ಖೇರಿ, ರಾಯಬರೇಲಿ, ಲಕ್ನೋ, ಕಾನ್ಪುರ್ ದೇಹಾತ್, ಬಾರಾಬಂಕಿ, ಸಿತ್ಪೋರ್ ಮತ್ತು ಸುಲ್ತಾನ್ಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.