ಉತ್ತರಪ್ರದೇಶ: ಜ 15 ರಂದು ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷರಿಗೆ ಪ್ರಿಯಾಂಕಾ ಮೇಡಂ ಪಾಠ

ಲಖನೌ, ಜ 11  ಪಕ್ಷಕ್ಕೆ ಹೊಸದಾಗಿ ನೇಮಕಗೊಂಡ ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರಿಗೆ ತರಬೇತಿ ನೀಡಲು ಉತ್ತರ ಪ್ರದೇಶದ (ಪೂರ್ವ) ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇದೇ 15 ರಿಂದ ಎರಡು ದಿನಗಳ ಸುದೀರ್ಘ 'ಪಾಠಶಾಲಾ' ಅಥವಾ ತರಬೇತಿ ಕಾರ್ಯಕ್ರಮವನ್ನು ರಾಯ್ ಬರೇಲಿಯಲ್ಲಿ ನಡೆಸಲು ಸಜ್ಜಾಗಿದ್ದಾರೆ.ಈ ಕುರಿತು ರಾಜ್ಯ ಕಾಂಗ್ರೆಸ್ ಸಮಿತಿ (ಉಸ್ತುವಾರಿ ಆಡಳಿತ) ಸಿದ್ಧಾರ್ಥ್ ಪ್ರಿಯಾ ಶ್ರೀವಾಸ್ತವ  ಶನಿವಾರ ಮಾಹಿತಿ ನೀಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ಬಹಿರಂಗಪಡಿಸಲು ಸಾರ್ವಜನಿಕ ಮತ್ತು ಇತರ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವ ಪಕ್ಷದ ನೀಲನಕ್ಷೆಯ ಬಗ್ಗೆ ಪ್ರಿಯಾಂಕಾ ಚರ್ಚಿಸಲಿದ್ದಾರೆ.ಎರಡನೇ ಹಂತದಲ್ಲಿ, ಎನ್‌ಸಿಆರ್ ಪ್ರದೇಶದಲ್ಲಿ ಶೀಘ್ರದಲ್ಲೇ ನಡೆಯಲಿರುವ ಶಿಬಿರದಲ್ಲಿ ಪಶ್ಚಿಮ ಉತ್ತರಪ್ರದೇಶದ ನಗರ ಮತ್ತು ಜಿಲ್ಲಾಧ್ಯಕ್ಷರು ಭಾಗವಹಿಸಲಿದ್ದಾರೆ.ಪ್ರಿಯಾಂಕಾ ವಾದ್ರಾ ಜಿಲ್ಲಾ ಅಥವಾ ನಗರ ಅಧ್ಯಕ್ಷರನ್ನಾಗಿ ನೇಮಿಸುವ ಮೊದಲು ಅವರೊಂದಿಗೆ ಸಂವಹನ ನಡೆಸಿದ್ದರು. ಒಟ್ಟು 108 ಜಿಲ್ಲಾ ಮತ್ತು ನಗರ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು,  ಮುಂದಿನ 21 ರಿಂದ ನಾಲ್ಕು ಜಿಲ್ಲಾ ಮತ್ತು 17 ನಗರ ಅಧ್ಯಕ್ಷರನ್ನು ಒಳಗೊಂಡಂತೆ ಮುಂದಿನ ಬುಧವಾರದಿಂದ ತರಬೇತಿ ಶಿಬಿರವನ್ನು ಪ್ರಾರಂಭಿಸುವ ಮೊದಲು ಘೋಷಿಸಲಾಗುವುದು.ತರಬೇತಿಯ ಸಮಯದಲ್ಲಿ, ಪಕ್ಷಕ್ಕೆ ಸಂಬಂಧಿಸಿದ ಇತರ ವಿಷಯಗಳು ಮತ್ತು ನೀತಿಗಳನ್ನು ನವೀಕರಿಸುವುದರ ಜೊತೆಗೆ, ಮುಂಬರುವ ಪಂಚಾಯತ್ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಗಳಲ್ಲಿ ಪೂರ್ಣ ಶಕ್ತಿಯೊಂದಿಗೆ ಹೋರಾಡುವ ಕಾರ್ಯತಂತ್ರವನ್ನೂ ರೂಪಿಸಲಾಗುವುದು. ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಾಲು ಕೂಡ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.