ಉತ್ತರಪ್ರದೇಶ: ಎಸ್‍ಟಿಎಫ್‍ ಗುಂಡಿಗೆ ಕುಖ್ಯಾತ ಅಪರಾಧಿ ಬಲಿ

ವಾರಾಣಸಿ, ಫೆ 12 :    ಮಂಗಳವಾರ ತಡರಾತ್ರಿ ನಗರದ ರಿಂಗ್ ರಸ್ತೆಯ ಸಿಂಗ್‌ಪುರದಲ್ಲಿ ಭೀಕರ ಅಪರಾಧಿ ರಾಜೇಶ್ ದುಬೆ ಅಲಿಯಾಸ್ ತುನ್ನಾ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗುಂಡಿಕ್ಕಿ ಕೊಂದಿದೆ.

 ಎನ್‌ಕೌಂಟರ್‌ನಲ್ಲಿ ಎಸ್‌ಟಿಎಫ್‌ನ ಕಮಾಂಡೋ ವಿನೋದ್ ಕುಮಾರ್ ಗಾಯಗೊಂಡಿದ್ದು, ಅಪರಾಧಿ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾನೆ.

 ಅಪರಾಧಿ ಈ ಹಿಂದೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ನಂತರ ಆತನ ಸುಳಿವಿಗೆ ಪೊಲೀಸರು 50 ಸಾವಿರ ರೂ.ಗಳ ಬಹುಮಾನವನ್ನು ಘೋಷಿಸಿದ್ದರು. ಮೃತ ಅಪರಾಧಿಯ ಬಳಿಯಿದ್ದ ಕಾರ್ಬೈನ್, ನಾಡ ಬಂದೂಕು 20 ಸುತ್ತು ಕಾರ್ಟ್ರಿಜ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಾರಾಣಸಿ, ಚಂದೌಲಿ, ಗಾಜಿಪುರ, ಬಸ್ತಿ ಮತ್ತು ಜಾರ್ಖಂಡ್‌ನಲ್ಲಿ ತುನ್ನಾ ವಿರುದ್ಧ ಸುಮಾರು 22 ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.ಅಪರಾಧಿ ತನ್ನ ಸಹಚರನೊಬ್ಬನೊಂದಿಗೆ ಚೌಬೈಪುರದಿಂದ ಸರಂತ್ ಕಡೆಗೆ ಹೋಗುತ್ತಿದ್ದ ವೇಳೆ ಪೊಲೀಸರು ಅವರ ಬೆನ್ನಟ್ಟೆದರು  ಈ ವೇಳೆ ಪೊಲೀಸರು ವಿರುದ್ಧವೇ ಅವರು ಗುಂಡು ಹಾರಿಸಿದಾಗ  ಪೊಲೀಸರ ಅಧಿಕಾರಿಯೊಬ್ಬರು ಗಾಯಗೊಂಡರು.  

  ತಿರುಗೇಟು ನೀಡಿದ ಪೊಲೀಸರು ಅಪರಾಧಿಯ ಮೇಲೆ ಗುಂಡು ಹಾರಿಸಿದಾಗ ಆತ ಮೃತಪಟ್ಟಿದ್ದು, ಸಹಚರ ಪರಾರಿಯಾಗಿದ್ದಾನೆ ಎಂದು ಎಸ್‌ಟಿಎಫ್ ಡಿಎಸ್‌ಪಿ ವಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.