ರಾಮರಾಜ್ಯ ನಿರ್ಮಾಣ ಕಷ್ಟವೇನಲ್ಲ: ಪ್ರೊ. ಬೆಣ್ಣಿ

ಕೊಪ್ಪಳ: ರಾಮಾಯಣದ ಪ್ರತಿ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ರಾಮರಾಜ್ಯ ನಿರ್ಮಾಣ ಕಷ್ಟವೇನಲ್ಲ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೋ. ಬಸವರಾಜ ಎಸ್. ಬೆಣ್ಣಿ ಹೇಳಿದರು.

ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಇತ್ತೀಚಿಗೆ ಜರುಗಿದ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಮಾಯಣ ಅತ್ಯದ್ಭುತ ಧರ್ಮಗ್ರಂಥ, ರಾಮರಾಜ್ಯ, ಜನಕಲ್ಯಾಣ, ಸತ್ಸಂಗ, ಸನ್ಮಾರ್ಗಗಳಂತಹ ಅನೇಕ ಆದರ್ಶನೀಯ ಅಂಶಗಳನ್ನು ಹೊಂದಿದೆ. ಅವುಗಳ ಪಾಲನೆ ಮತ್ತು ಅಳವಡಿಕೆ ಕೊರತೆಯ ಪರಿಣಾಮ ನಾವಿಂದು ಕಲಿಯುಗವನ್ನು ನೋಡುತ್ತಿದ್ದೇವೆ. ನಾರದ ಮಹರ್ಷಿಗಳ ಕೆಲ ಹಿತೋಕ್ತಿಗಳಿಂದ ದರೋಡೆಕೋರನಾಗಿದ್ದ ರತ್ನಾಕರ ಮಹಷರ್ಿಯಾಗಿ, ವಾಲ್ಮೀಕಿಯಾಗಿ ಪರಿವರ್ತನೆಯಾದರು. ವಾಲ್ಮೀಕಿ ರಚಿತ ರಾಮಾಯಣ ನಮ್ಮಲ್ಲಿದೆ. ಆದರೂ ರಾಮರಾಜ್ಯ ನಿರ್ಮಾಣ ಕನಸಾಗಿಯೇ ಉಳಿದಿರುವುದು ವಿಷಾದನೀಯ ಸಂಗತಿ. ರಾಮಾಯಣದಲ್ಲಿ ಏಕಪತ್ನಿತ್ವ, ತ್ಯಾಗ, ಆಜ್ಞಾ ಪಾಲನೆಯಂತಹ ವಿಷಯಗಳು ಸ್ವಸ್ಥ, ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಅತ್ಯಗತ್ಯ. ರಾವಣ ಭಸ್ಮ ಮತ್ತು ಲಂಕಾ ದಹನಕ್ಕೆ ಕಾರಣವೇ ಪರಸ್ತ್ರೀ ವ್ಯಾಮೋಹ ಅದನ್ನು ಹೊರತುಪಡಿಸಿದರೆ ರಾವಣನಂತಹ ಮಹಾನ್ ದೈವಭಕ್ತ ಮತ್ತೊಬ್ಬನಿಲ್ಲ, ಶಿವನಿಂದ ಆತ್ಮಲಿಂಗವನ್ನೇ ಪಡೆದಂತಹ ತಪಸ್ವಿ ಕೇವಲ ಪರಸ್ತ್ರೀ ವ್ಯಾಮೋಹಕ್ಕೆ ರಾಮನಿಂದ ದಹನವಾದ. ಸಮಾಜ ಮತ್ತು ಸಮುದಾಯಗಳಲ್ಲಿ ನೈತಿಕ ಮೌಲ್ಯಗಳ ಪಾಲನೆ, ಆಚರಣೆ, ಅಳವಡಿಕೆ ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ರವಿಚಂದ್ರ, ವಾಣಿಜ್ಯಶಾಸ್ತ್ರ ಸಹಾಯಕ ಉಪನ್ಯಾಸಕ ಪ್ರಕಾಶ ಯಳವಟ್ಟಿ, ದೈಹಿಕ ಕ್ರೀಡಾ ನಿರ್ದೇ ಶಕರಾದ ಗುರುಸ್ವಾಮಿ ಹಾಗೂ ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾಥರ್ಿಗಳು ಭಾಗವಹಿಸಿದ್ದರು.