ಕಜಾವಿವಿಯ ಶೈಕ್ಷಣಿಕ ಸೌಲಭ್ಯವನ್ನು ಬಳಸಿಕೊಳ್ಳಿ ಕುಲಪತಿ ಕಿವಿಮಾತು

ಲೋಕದರ್ಶನ ವರದಿ

ಶಿಗ್ಗಾವಿ/ಗೊಟಗೋಡಿ: ವಿದ್ಯಾಥರ್ಿಗಳು ಸಮಯ ವ್ಯರ್ಥ ಮಾಡದೇ ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚು ಗಮನ ಕೊಡಬೇಕು. ವಿವಿ ನೀಡಿರುವ ಉಚಿತ ಲ್ಯಾಪಟಾಪ್ಗಳನ್ನು ತಮ್ಮ ವಿದ್ಯಾಭ್ಯಾಸದ ಬೆಳವಣಿಗೆಗೆ ಉಪಯೋಗಿಸಿಕೊಳ್ಳಬೇಕು ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ ಅವರು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು, ವಿದ್ಯಾಥರ್ಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡಿದರು. ವಿದ್ಯಾಥರ್ಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಜಾನಪದ ವಿಶ್ವವಿದ್ಯಾಲಯ ಪ್ರೋತ್ಸಾಹ ನೀಡುತ್ತಿದೆ. ವಿಶ್ವವಿದ್ಯಾಲಯ ವಿದ್ಯಾಥರ್ಿಗಳ ಭವಿಷ್ಯಕ್ಕೆ ಅನುಕೂಲವಾಗುವಂತೆ ಸ್ಪಧರ್ಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.

ಅನೇಕ ಉತ್ತಮವಾದ ವಿವಿಧ ಸೌಲಭ್ಯ ಒದಗಿಸುವ ಮೂಲಕ ವಿದ್ಯಾಥರ್ಿಗಳ ಹಿತಕಾಯುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಹೊಂದಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೊ. ಚಂದ್ರಶೇಖರ, ಕುಲಸಚಿವರು ಅವರು ಮಾತನಾಡಿ ಇಂದಿನ ದಿನಗಳ ವಿದ್ಯಾಥರ್ಿಗಳ ಕೈಯಲ್ಲಿ ಒಳ್ಳೆಯದು ಕೆಟ್ಟದ್ದು ಎರಡು ಇವೆ. ಇವತ್ತಿನ ವಿವಿಧ ಮಾಧ್ಯಮಗಳು ವಿದ್ಯಾಥರ್ಿಗಳ ಏಕಾಗ್ರತೆಯನ್ನು ಹಾಳು ಮಾಡುವಂತವುಗಳಾಗಿರುತ್ತವೆ. ಇದಕ್ಕೆಲ್ಲ ಮರುಳಾಗದೆ ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಂಡು ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉಚಿತವಾಗಿ ಲ್ಯಾಪಟಾಪ್ ದೊರೆತ ವಿದ್ಯಾಥರ್ಿಗಳ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಾದ ಮುತ್ತಪ್ಪ ಲಮಾಣಿ ಮತ್ತು  ನಾಗರಾಜ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಹಾಯಕ ಗ್ರಂಥಪಾಲಕರಾಧ ಡಾ. ಕೋಟೆಪ್ಪ ಬಾಣತೆಪ್ಪನವರ ಅವರು ಸ್ವಾಗತಿಸಿದರು. ಸಹಾಯಕ ಕುಲಸಚಿವರಾದ  ಶಹಜಹಾನ ಮುದಕವಿ ಕಾರ್ಯಕ್ರಮ ವಂದಿಸಿದರು. 


ವಿ