6ರಂದು ಉದರ್ುಮುಶಾಯರ ಕಾರ್ಯಕ್ರಮ

ಲೋಕದರ್ಶನ ವರದಿ

ಕೊಪ್ಪಳ 04: ಕನರ್ಾಟಕ ರಾಜ್ಯ ಸಕರ್ಾರದ ಕನರ್ಾಟಕ ಉದರ್ು ಅಕಾಡೆಮಿ ಬೆಂಗಳೂರು ಹಾಗೂ ಕೊಪ್ಪಳದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೆ ಜನವರಿ 6ರ ರವಿವಾರ ರಾತ್ರಿ 08:30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಮುಶಾಯರಾ (ಉದರ್ು ಕವಿಗೋಷ್ಠಿ) ಬೃಹತ್ ಕಾರ್ಯಕ್ರಮ ಜರುಗಲಿದೆ ಎಂದು ನಗರಸಭ ಮಾಜಿ ಅದ್ಯಕ್ಷ ಹಾಗೂ ಮುಸ್ಲಿಂ ಸಮಾಜದ ಮುಖಂಡ ಅಮ್ಜದ್ ಪಟೇಲ್ ರವರು ಪತ್ರಿಕಾ ಭವನದಲ್ಲಿ ಪತ್ರಿಕಾ ಗೊಷ್ಠೀಯಲ್ಲಿ ಹೇಳಿದರು.

ಅವರು ಮುಂದುವರಿದು ಮಾತನಾಡುತ್ತಾ ಅದೇ ದಿನ ಬೆಳಿಗ್ಗೆ 10:30 ಗಂಟೆಗೆ ಉದರ್ು ಶಿಕ್ಷಣ ಸೆಮಿನಾರ್ ಕೊಡ ನಡೆಯಲಿದ್ದು ಇದರಲ್ಲಿ ಉದರ್ು ಶೈಕ್ಷಣಿಕ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಜಿಲ್ಲೆಯ ಎಲ್ಲಾ ಉದರ್ು ಶಾಲಾ ಶಿಕ್ಷಕರು,  ಪಾಲಕರು ಮತ್ತು ವಿದ್ಯಾಥರ್ಿಗಳಿಗೆ ಸೆಮಿನಾರ್ನಲ್ಲಿ ಕನರ್ಾಟಕ ಉದರ್ು ಅಕಾಡಮಿ ವತಿಯಿಂದ ತರಬೇತಿ ನೀಡಲಾಗುವುದು ಹಾಗೂ ಉದರ್ು ಶಿಕ್ಷಣ ಸಮಿನಾರ್ ಮತ್ತು ರಾತ್ರಿ ನಡೆಯುವ ಮುಶಾಯರಾ ಕಾರ್ಯಕ್ರಮದಲ್ಲಿ ಕನರ್ಾಟಕ ಉದರ್ು ಅಕಾಡಮಿಯ ರಾಜ್ಯ ಅದ್ಯಕ್ಷರಾದ ಮಬೀನ್ ಮುನ್ವರ್ ಮತ್ತು ಅಕಾಡಮಿಯ ಸದಸ್ಯರು ಉದರ್ು ಸಾಹಿತಿ ಮತ್ತು ಸುಮಾರು 15 ಜನ ರಾಜ್ಯ ಮತ್ತು ರಾಷ್ಟ್ರೀಯ ಉದರ್ು ಕವಿಗಳು ಭಾಗವಹಿಸಿ ತಮ್ಮ ಕವನವಾಚನ ಮಾಡಲಿದ್ದಾರೆ ಸಾರ್ವಜನಿಕರು,ಸಮಾಜ ಬಾಂಧವರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು. 

ಸಮಿನಾರ್ನ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪಾನಿದರ್ೆಶಕರಾದ ಉಮಾದೇವಿ ಸೊನ್ನದ್ ನೆರೆವೇರಿಸಲಿದ್ದಾರೆ ಹಾಗೂ ಮುಶಾಯರಾ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ಶಾಸಕ ಕೆ.ರಾಘವೆಂದ್ರ ಹಿಟ್ನಾಳ್ ನೆರವೇರಿಸುವವರು ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರರಾದ ಸುರೇಶ್ ಭೂಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶೊಭ ಬಾಗೇವಾಡಿ ಸೇರಿದಂತೆ ಅನೇಕರು ಪಾಲ್ಗೋಳ್ಳಲಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಾಷು ಸಾಬ್ ಖತಿಬ್, ಎಂ.ಡಿ. ಯೂಸೂಫ್ ಖಾನ್, ಮತ್ತಿತರರು ಉಪಸ್ಥಿತರಿದ್ದರು.