ಹುನಗುಂದ10: ವಿದ್ಯುತ್ ಬಳಕೆಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಎಚ್ಚರಿಕೆಯಿಂದ ವಿದ್ಯುತ್ ಬಳಸಿದರೆ ಯಾವುದೇ ತರಹದ ಅಪಾಯ ಸಂಭವಿಸುದಿಲ್ಲ ಎಂದು ಸಹಾಯಕ ಅಭಿಯಂತಖ ಬಾಲಾಜಿ ಸಿಂಗ್ ಹೇಳಿದರು. ಇಲ್ಲಿನ ಕೆಬಿ ಕಚೇರಿ ಆವರಣದಲ್ಲಿ ಹೆಸ್ಕಾಂ ಕಂಪನಿ ಹಮ್ಮಿಕೊಂಡ ವಿದ್ಯುತ್ ಉಳಿತಾಯ ಮತ್ತು ಸುರಕ್ಷಾ ಜಾಗೃತಿ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡುತ್ತ ನಾವು ಎಂತಹ ಆತುರತೆಯಲ್ಲಿದ್ದರೂ ವಿದ್ಯುತ್ ಬಳಸುವಾಗ ಮುಂಜಾಗೃತಾ ಕ್ರಮವಹಿಸಬೇಕು. ಸಣ್ಣ ನಿರ್ಲಕ್ಷದಿಂದ ದೊಡ್ಡ ಅನಾಹುತವಾಗಬಹುದು ಎಂದರು. ಮನೆಯಲ್ಲಿ ಗೃಹಿಣಿಯರು ವಿವಿಧ ಬಗೆಯಲ್ಲಿ ವಿದ್ಯುತ್ ಬಳಸುವಾಗ ಮಕ್ಕಳ ಸುರಕ್ಷೆ ಬಗ್ಗೆ ಎಚ್ಚರವಹಿಸಬೇಕು. ಜೊತೆಗೆ ಅಪಾಯದ ಮುನ್ಸೂಚನೆ ತಿಳಿದಾಗ ಮತ್ತೊಬ್ಬರ ಸಹಾಯ ಪಡೆಯುವದರಿಂದ ಅನಾಹುತ ತಪ್ಪಬಹುದೆಂದರು. ಶಂಕ್ರಪ್ಪ ಹೂಗಾರ ಮಾತನಾಡಿ ನಮ್ಮ ವಿದ್ಯುತ್ ನಮಗೆ ಶತ್ರು ಎಂಬಂತೆ ಯಂತ್ರಗಳಲ್ಲಿ, ಕೃಷಿ ಚಟುವಟಿಕೆಯಲ್ಲಿ ಗ್ರಾಮೀಣ ಪ್ರದೇಶದ ಗ್ರಾಹಕರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯುತ್ ಬಳಸುವವರು ಹುಂಬುತನಕ್ಕೆ ಅವಕಾಶ ನೀಡದೆ ತಿಳುವಳಿಕೆ ಮತ್ತು ತಾಳ್ಮೆಯಿಂದ ಮುನ್ನೆಚ್ಚರಿಕೆ ವಹಿಸಿ ವಿದ್ಯುತ್ ಬಳಸಬೇಕು. ಅನುಮೋದಿತ ಕಂಪನಿಗಳು ಸರಬರಾಜು ಮಾಡುವ ಗುಣಮಟ್ಟದ ಸೋಲಾರ ಮತ್ತು ಎಲ್ಇಡಿ ಅಧುನಿಕ ಉಪಕರಣಗಳನ್ನು ಬಳಸಿ ವಿದ್ಯುತ್ ಉಳಿತಾಯ ಮಾಡಬೇಕು. ಜೊತೆಗೆ ಇಲಾಖೆ ಸಿಬ್ಬಂದಿಯು ನಮ್ಮ ಮನೆಯವರೆಂದು ಅವರ ಜೊತೆ ತಾಳ್ಮೆ ಮತ್ತು ಸಹಕಾರದಿಂದ ನಡೆದಾಗ ಅವರು ಹೆಚ್ಚಿನ ಸೇವೆ ನೀಡಲು ಸಾಧ್ಯ ಎಂದರು. ಪ್ರಭಾರಿ ಲೆಕ್ಕಾಧಿಕಾರಿ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಮಲ್ಲು ಹೂಗಾರ, ಎಸ್.ಎಸ್. ಮುರನಾಳ, ಎಸ್.ಎಮ್. ಕಂದಗಲ್ಲ, ಗುತ್ತಿಗೆದಾರ ರಾಜು ಅಮರಾವತಿ, ಬಿ.ಸಿ. ಹಿರೇಮಠ, ಬಸವರಾಜ ವಾಲಿಕಾರ, ಸಚಿನ್ ಪೂಜಾರಿ, ಶಿವರಾಜ ರೇವಡಿ, ಸುಶೀಲಕುಮಾರ ಮಲಗಿಹಾಳ ಉಪಸ್ಥಿತರಿದ್ದರು. ಎಮ್.ಎಸ್. ಮುಸುರಿ ಪ್ರಾಥರ್ಿಸಿದರು. ಎಸ್.ಎಸ್. ಭಿನ್ನಪತಿ ವಂದಿಸಿದರು.