ತಾಯಿ, ಶಿಶು ಮರಣ ದರ ಕಡಿಮೆ ಮಾಡಲು ತಾತ್ಕಾಲಿಕ ಹೊಸ ವಿಧಾನ ಬಳಸಿ'

ಕೊಪ್ಪಳ: ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ದರ ಕಡಿಮೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾತ್ಕಾಲಿಕ ಹೊಸ ವಿಧಾನಗಳನ್ನು ಬಳಸಿಕೊಳ್ಳುವಂತೆ ಕೊಪ್ಪಳ ಕಿಮ್ಸ್ ನಿದರ್ೇಶಕ ಡಾ. ದತ್ತಾತ್ರೇಯ ಡಿ. ಬಂಟ್ ರವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಎನ್ಜೆಂಡರ್ ಆರೋಗ್ಯ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ನಗರದ ಬಿ. ಎಸ್. ಪವಾರ್ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಸೇವೆಗಳನ್ನು ಉತ್ತಮವಾಗಿ ಒದಗಿಸುತ್ತಿರುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಂಸ್ಥೆಗಳಿಗೆ  ಸನ್ಮಾನ ಮತ್ತು ಪ್ರಗತಿ ನೋಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಕುಟುಂಬ ಕಲ್ಯಾಣ ಸೇವೆಗಳನ್ನು ಬಲಪಡಿಸುವ ಮುಖ್ಯ ಗುರಿ "ಎನ್ಜೆಂಡರ್ ಹೆಲ್ತ್ ಸಂಸ್ಥೆ"ಯ ಉದ್ದೇಶವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಆಯ್ದ ಆರೋಗ್ಯ ಸಂಸ್ಥೆಗಳಾದ ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎನ್ಜೆಂಡರ್ ಸಂಸ್ಥೆಯು ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸಿ ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.  ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ದರ ಕಡಿಮೆ ಮಾಡಲು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಾತ್ಕಾಲಿಕ ಹೊಸ ವಿಧಾನಗಳು ಬಂದಿದ್ದು, ಈ ಪ್ರಶಸ್ತಿ ನೀಡುತ್ತಿರುವುದು ನನಗೂ ಸಂತೋಷ ನೀಡುತ್ತಿದ್ದು, ಎಲ್ಲರೂ ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ ಶ್ರಮವಹಿಸಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ್ ಎಸ್. ಯರಗಲ್ ಮಾತನಾಡಿ ಎನ್ಜೆಂಡರ್ ಸಂಸ್ಥೆಯ ವತಿಯಿಂದ ಆಯ್ಕೆಯಾದ ಆರೋಗ್ಯ ಸಂಸ್ಥೆಗಳಲ್ಲಿ ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸುತ್ತಿರುವ ಆಸ್ಪತ್ರೆಯ ವೈದ್ಯರು ಮತ್ತು ಶುಷ್ರೂಷಕರಿಗೆ ತರಬೇತಿಯನ್ನು ನೀಡಲಾಗಿದ್ದು, ಈ ಆರೋಗ್ಯ ಸಂಸ್ಥೆಗಳು ದಂಪತಿಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸಜ್ಜುಗೊಂಡಿವೆ. ಆಶಾ ಕಾರ್ಯಕತರ್ೆಯರಿಗೆ ಸಹ ಕುಟುಂಬ ಕಲ್ಯಾಣ ಯೋಜನೆಯ ತರಬೇತಿಯನ್ನು ನೀಡಲಾಗುತ್ತದೆ. ಕುಟುಂಬ ಕಲ್ಯಾಣ ಕಾರ್ಯಕ್ರಮ ಆರೋಗ್ಯ ಇಲಾಖೆಯ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಆರೋಗ್ಯವಂತ ತಾಯಿ ಮತ್ತು ಮಗುವನ್ನು ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ಹೊಸ ಹೊಸ ತಾತ್ಕಾಲಿಕ ವಿಧಾನಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ನೀಡಿ ಫಲಾನುಭವಿಗಳು ವಿಧಾನಗಳನ್ನು ಅನುಸರಿಸುವಂತೆ ಪ್ರೇರೇಪಿಸಿದರೆ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಬೆಂಗಳೂರು ರಾಜ್ಯ ಎನ್ಜೆಂಡರ್ ಹೆಲ್ತ್ ಸಂಸ್ಥೆಯ ಪ್ರೊಜೆಕ್ಟ್ ಕೋ ಆಡರ್ಿನೇಟರ್ ಡಾ. ಧನ್ಯಕುಮಾರ ಮಾತನಾಡಿ, ನಮ್ಮ ದೇಶ, ರಾಜ್ಯ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕುಟುಂಬ ಕಲ್ಯಾಣ ಯೋಜನೆಯ ಮಹತ್ವವನ್ನು ಹಾಗೂ ಕುಟುಂಬ ಯೋಜನೆಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿ,  ಪರಿಣಾಮಕಾರಿಯಾದ ಆಪ್ತಸಮಾಲೋಚನೆಯ ಮೂಲಕ ಮಹಿಳೆ ತನ್ನ ಸಂತಾನೋತ್ಪತ್ತಿ, ಆರೋಗ್ಯ ಹಕ್ಕುಗಳನ್ನು ಚಲಾಯಿಸಲು ಸಮರ್ಥವಾಗಿರಬಲ್ಲಳು. ಈ ಎಲ್ಲಾ ಗರ್ಭನಿರೋಧಕ ಯೋಜನೆಗಳನ್ನು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ.ದಾನರೆಡ್ಡಿ, ಜಿಲ್ಲಾ ಅರ್.ಸಿ.ಎಚ್ ಅಧಿಕಾರಿ ಡಾ. ಲಿಂಗರಾಜ್ ಟಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಜಂಬಯ್ಯ ಬಿ, ಜಿಲ್ಲಾ ಕುಷ್ಠರೋಗ ನಿಮರ್ೂಲನ ಅಧಿಕಾರಿ ಡಾ. ಎಸ್. ಕೆ. ದೇಸಾಯಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ್ ಎಂ. ಜಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ,  ಕುಕನೂರು ಸ.ಆ.ಕೇಂದ್ರದ ಸ್ತ್ರೀರೋಗ ತಜ್ಞ ಡಾ. ಸುಶೀಲ್ ಕುಮಾರ್ ಕಲಾಲ್, ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಧನಲಕ್ಷ್ಮೀ, ವೈದ್ಯರು, ಶೂಶ್ರೂಷಕರು, ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾ ಆಶಾ ಮೆಂಟರ್, ಬಿ.ಪಿ.ಎಂ,  ಆಪ್ತ ಸಮಾಲೋಚಕರು, ಎನ್ಜೆಂಡರ್ ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ವಿಜೇತರಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಹೆಚ್ಚಿನ ಸಂಖ್ಯೆಯ ಪಿಪಿಐಯುಡಿ/ ಪಿಐಯುಸಿಡಿ/ ಮಧ್ಯಂತರ ಐಯುಸಿಡಿಯನ್ನು (PPIUCD  / PAIUCD  / Interval IUCD  ) ಅಳವಡಿಸಿದ ಸಾಧನೆಗಾಗಿ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಕೊಪ್ಪಳಕ್ಕೆ ಹೆಚ್ಚಿನ ಸಂಖ್ಯೆಯ ಅಂತರ ಇಂಜೆಕ್ಷನ್ (injecta ble ಟಿಣಚಿಡಿಚಿ/ಒಕಂ) ಸೇವೆಯನ್ನು ನೀಡಿರುವುದಕ್ಕಾಗಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕೊಪ್ಪಳದ ಸ್ತ್ರೀರೋಗ ತಜ್ಞರಾದ ಡಾ. ಚಂದ್ರಕಲಾ, ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿಯಾದ ಅನಿತಾ ಹುಬ್ಬಳ್ಳಿ, ಯಲಬುರ್ಗಾ  ಸಾರ್ವಜನಿಕ ಆಸ್ಪತ್ರೆ ಇವರಿಗೆ ಹೆಚ್ಚಿನ ಸಂಖ್ಯೆಯ ಪಿಪಿಐಯುಡಿಯನ್ನುPPIUCD ಅಳವಡಿಸಿದ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯಲ್ಲಿ ಅತಿಹೆಚ್ಚು  PAIUCD ಗರ್ಭಪಾತದ ನಂತರ ಕಾಪರ್-ಟಿ ಅಳವಡಿಸಿದ್ದಕ್ಕಾಗಿ ಗಂಗಾವತಿ ಸಾರ್ವಜನಿಕ ಆಸ್ಪತ್ರೆಯ ಉತ್ತಮ ಸೇವೆಯನ್ನು ಗುರುತಿಸಿ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಇವರಿಗೆ ಪ್ರಶಸ್ತಿ ವಿತರಿಸಲಾಯಿತು. ಕೊಪ್ಪಳ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ನಲ್ಲಿ ಹೆಚ್ಚಿನ ಸಂಖ್ಯೆಯ ಪಿಪಿಐಯುಡಿಯನ್ನು PPIUCD ಅಳವಡಿಸಿರುವುದರ ಪ್ರಯುಕ್ತ ಡಾ. ಬಸವರಾಜ ಸಜ್ಜನ ಹಾಗೂ ಶುಶ್ರೂಕಿಯಾದ ಶಾಯಿದಾ ರವರ ಸೇವೆಯನ್ನು ಗುರುತಿಸಲಾಯಿತು ಹಾಗೂ ಕುಟುಂಬ ಕಲ್ಯಾಣ ವಿಧಾನಗಳ ಕುರಿತು ಆಪ್ತ ಸಮಾಲೋಚನೆಯಲ್ಲಿ ಉತ್ತಮ ಆಪ್ತ ಸಮಾಲೋಚನೆ ಕೊಠಡಿಗಾಗಿ ಗಂಗಾವತಿ ಸಾರ್ವಜನಿಕ ಆಸ್ಪತ್ರೆಯ ಸಮಾಲೋಚಕಿಯಾದ ಲಕ್ಷ್ಮೀಯವರಿಗೆ ಹಾಗೂ ಉತ್ತಮ ಆಪ್ತ ಸಮಾಲೋಚನೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಕೊಪ್ಪಳದ ಸಮಾಲೋಚಕಿಯಾದ ವಿಜಯಲಕ್ಷ್ಮೀಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.