ದಿನ ಬಳಕೆ ಆಹಾರ ಪದ್ಧತಿಗೆ ಜವಾರಿ ವಸ್ತುಗಳನ್ನು ಬಳಸಿ: ಮಲ್ಲಿಕಾರ್ಜುನ ರೆಡ್ಡೇರ

ದಿನ ಬಳಕೆ ಆಹಾರ ಪದ್ಧತಿಗೆ ಜವಾರಿ ವಸ್ತುಗಳನ್ನು ಬಳಸಿ: ಮಲ್ಲಿಕಾರ್ಜುನ ರೆಡ್ಡೇರ  Use millet products for daily consumption: Mallikarjuna Reddera

ನೇಸರಗಿ, 23 : ನಮ್ಮ ದೇಶದಲ್ಲಿ ಬೆಳೆಯುವ ಹಾಗೂ ದಿನನಿತ್ಯ ಬಳಕೆ ವಸ್ತುಗಳಾದ ಅಕ್ಕಿ, ಗೋದಿ, ಬೆಲ್ಲ, ಕಾಳು ಬೀಜಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ, ತರಕಾರಿ  ಇನ್ನೂ ಅನೇಕ ವಸ್ತುಗಳನ್ನು ನಾವು ಭಾರತ ದೇಶದ ಜವಾರಿ ಹಾಗೂ ಸಾವಯವ ವಸ್ತುಗಳ ಬಳಕೆಯಿಂದ ನಮ್ಮ ಶರೀರವನ್ನು ಸದೃಢವಾಗಿಡಲು ನಾವೆಲ್ಲರೂ ಕೈಜೋಡಿಸಬೇಕೆಂದು   ವರದಶ್ರೀ ಫೌಂಡೇಶನ ಇದರ ಅಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡೇರ  ಹೇಳಿದರು.   

ಅವರು ಸೋಮವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾ ಮಠದಲ್ಲಿ ಶ್ರೀ ವರದಶ್ರೀ ಫೌಂಡೇಶನ ಸಹಯೋಗದೊಂದಿಗೆ  ಆಯೋಜಿಸಲಾಗಿದ್ದ ಕಣ್ಣಿನ ಮತ್ತು ಮೂಗು, ಕಿವಿಗಳ ಸಂರಕ್ಷಣೆಗೆ ಸಿದ್ದಿ ಹನಿ ರಸ  ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ ಇಂದು ನಾವು ಬೇಕಾಬಿಟ್ಟಿ ರಾಸಾಯನಿಕ ಮಿಶ್ರಿತ ಹೈಬ್ರಿಡ್  ಆಹಾರ ಪದಾರ್ಥಗಳನ್ನು ತಿಂದು ನಮ್ಮ ಶರೀರವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಶುದ್ಧ ಜವಾರಿ ಆಕಳಿನ ಹಾಲು, ತುಪ್ಪ ಸೇವಿಸಬೇಕು. ಕನ್ನೇರಿ ಮಠದ ಅನೇಕ ಅರೋಗ್ಯ ರಕ್ಷಕ ಆಹಾರ ಪದಾರ್ಥಗಳು ಲಭಿಸುತ್ತಿದ್ದು ಅದರ ಪ್ರಯೋಜನ ಪಡೆಯಬೇಕು ಎಂದರು.   

ಶ್ರೀ ವಿನಾಯಕ ಕಂಪ್ಯೂಟರ ಶಾಲೆಯ ಅಧ್ಯಕ್ಷ ಬಸವರಾಜ ಹಿರೇಮಠ ಮಾತನಾಡಿ ವರದಶ್ರೀ ಫೌಂಡೇಶನ್ ಹಲವಾರು ಸೋಮವಾರ ದಿನ  ವಾರಗಳ ಕಾಲ ಅಜ್ಜನವರ ದೇವಸ್ಥಾನದಲ್ಲಿ ಸಿದ್ದಿ ಹನಿ ರಸ ಹಾಕಿ ಈ ಭಾಗದ ಜನರ ಕಣ್ಣು ಮತ್ತು ಆರೋಗ್ಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅದಕ್ಕಾಗಿ ಹಲವಾರು ಜನ ಚಸ್ಮಾ ಇದ್ದವರು, ಮಂಜು ಕಾಣುವದು, ಕಣ್ಣು ನೋವು  ವಾಸಿಯಾಗಿವೆ ಎನ್ನುತ್ತಿದ್ದಾರೆ ಎಂದರು.    

ಈ ಸಂದರ್ಭದಲ್ಲಿ ಗುರುಪಾದಯ್ಯ ಚರಂತಿಮಠ, ಅಶೋಕ ಅಗಸಿಮನಿ, ಯಲ್ಲಪ್ಪ ರೊಟ್ಟಿ, ಬಸವರಾಜ ಸಾಲಿಮಠ,  ಚನ್ನಬಸಪ್ಪ ರಾಚಣ್ಣವರ,ನಿವೃತ್ತ ಎಎಸ್‌ಐ ಎಚ್ ಬಿದರಿ, ವಿರೂಪಾಕ್ಷ ನೇಸರಗಿ, ಹುಸೇನ್ ಮುಲ್ಲಾ, ಗೀತಾ ಹೆರಂಜಲ್, ಸುನೀತಾ ಜೈನ, ರಾಮನಗೌಡ ಗಡ್ಡೆನವರ, ವರದಶ್ರೀ  ಸ್ವಯಂ ಸೇವಕರಾದ ವಿಶ್ವನಾಥ ರೆಡ್ಡಿ, ಅಭಿಷೇಕ ಚವಾನ, ಚಿರಂಜೀವಿ ಚಿತ್ರೆ, ಅಭಿಷೇಕ ಪಾಟೀಲ, ಈರಣ್ಣ ಅಂಗಡಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಚಿಕಿತ್ಸೆಗೆ ಬಂದ ಅಪಾರ ಜನತೆ, ಮುಖಂಡರು, ಹಿರಿಯರು, ರೈತರು, ಮಹಿಳೆಯರು ಪಾಲ್ಗೊಂಡಿದ್ದರು.