ಕೊಪ್ಪಳ: ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ದಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಹಾಗೂ ಮಾನಸಿಕ ವಿಕಲತೆ, ಕಿವುಡು ಹಾಗೂ ಮೂಕತನ, ಮೆಳ್ಳೆಗಣ್ಣು, ಸ್ನಾಯುಗಳ ಮರಗಟ್ಟುವಿಕೆ, ಕುಬ್ಜತನ, ಗಳಗಂಡ ರೋಗ, ಇಂತಹ ದುಷ್ಟರಿಣಾಮಗಳು ಬೀರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದಿನ ನಿತ್ಯದ ಆಹಾರದಲ್ಲಿ ಕಡ್ಡಾಯವಾಗಿ ಅಯೋಡಿನ್ಯುಕ್ತ ಉಪ್ಪನ್ನೇ ಬಳಸಿ ಎಂದು ಜಿಲ್ಲಾ-ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಪ್ರೌಢಶಾಲೆ ಕಿನ್ನಾಳ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ''ವಿಶ್ವ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ದಿನ'' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿವರ್ಷ ಅಕ್ಟೋಬರ್. 21 ರಿಂದ 27 ರವರೆಗೆ ''ವಿಶ್ವ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣದ ಸಪ್ತಾಹ'' ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ಯುಕ್ತ ಉಪ್ಪಿನ ಬಳಕೆಯ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವುದು ಹಾಗೂ ಅಯೋಡಿನ್ ಕೊರತೆಯಿಂದಾಗುವ ನ್ಯೂನತೆಗಳ ಬಗ್ಗೆ ಹಾಗೂ ಅಯೋಡಿನ್ಯುಕ್ತ ಬಳಕೆಯಿಂದಾಗುವ ಅನುಕೂಲತೆ ಬಗ್ಗೆ, ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣ ನೀಡುವುದು ಅಯೋಡಿನ್ ವಿಶ್ಲೇಷಣೆ ಮಾಡುವುದು ಈ ಸಪ್ತಾಹದ ಉದ್ದೇಶವಾಗಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಮೊದಲಿಗೆ 1988ರಲ್ಲಿ ಪ್ರಾರಂಭವಾಯಿತು. ಎನ್.ಎಫ್.ಎಚ್.ಎಸ್-4ರ ಪ್ರಕಾರ ಭಾರತದ ಮನೆಗಳಲ್ಲಿ ಅಯೋಡಿನ್ಯುಕ್ತ ಉಪ್ಪನ್ನು ಶೇ. 96.5 ರಷ್ಟು, ಕನರ್ಾಟಕದ ಮನೆಗಳಲ್ಲಿ ಶೇ. 86.8ರಷ್ಟು ಬಳಸಲಾಗುತ್ತದೆ. ಗಭರ್ಿಣಿಯರಲ್ಲಿ ಮೈಯಿಳಿತ, ಸತ್ತು ಹುಟ್ಟುವ ಮಕ್ಕಳು ಹಾಗೂ ಶಿಶುವಿನ ಮೆದುಳಿನ ಮೇಲೆ ಸರಿಪಡಿಸಲಾಗದಂತಹ ರೋಗಗಳು ಬರುತ್ತವೆ ಎಂದು ತಿಳಿದು ಬಂದಿದ್ದು, ಅಯೋಡಿನ್ ಅಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳಾದ ಗಜ್ಜರಿ, ಸಮುದ್ರ ಕಳೆ (ಸಸ್ಯ), ಮೊಟ್ಟೆ, ಮೀನು, ಸೀಗಡಿ ಮೀನು ಇಂತಹ ಆಹಾರ ಪದಾರ್ಥಗಳಲ್ಲಿ ಅಯೋಡಿನ್ ಅಂಶ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಅವುಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ-ಪ್ರಾಂಶುಪಾಲರಾದ ಶರಣಪ್ಪ ಎನ್. ಕಡಿ ಇವರು ಮಾತನಾಡಿದರು. ಹದಿ-ಹರೆಯದವರು ಈ ದೇಶದ ಸಂಪತ್ತು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಈ ಪೀಳಿಗೆಯ ಆರೋಗ್ಯ ಕಾಪಾಡುವುದು ಇಲಾಖೆಗಳ ಹಾಗೂ ಪಾಲಕರ ಜವಾಬ್ದಾರಿಯಾಗಿದೆ. ಆರೋಗ್ಯ ಇಲಾಖೆ ಹಮ್ಮಿಕೊಂಡ ಇಂತಹ ಕಾರ್ಯಕ್ರಮ ಯುವಕರಿಗೆ ಮಹತ್ವ ಪೂರ್ಣ ಕಾರ್ಯಕ್ರಮವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಹಿರಿಯ ಆರೋಗ್ಯ ಮೇಲ್ವಿಚಾರಕ ಮಹಾದಯ್ಯ ಹಿರೇಮಠ ಮಾತನಾಡಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ, ಆಯುಷ್ಮಾನ್ ಭಾರತ್ ಕರ್ನಾಟಕ, ''ರಕ್ತಹೀನತೆ ಮುಕ್ತ ಭಾರತ್' ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಶಂಕರಗೌಡ, ಶರಣಯ್ಯ, ಮುಂತಾದ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.