ಮಹಾಲಿಂಗಪುರ18 :ಸರ್ಕಾರ ಪ್ರತಿವರ್ಷ ರಸ್ತೆ, ಚರಂಡಿ, ವಿದ್ಯುತ ದೀಪ, ನೀರು ಹೀಗೆ ಹತ್ತು ಹಲವಾರು ಯೋಜನೆಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದೆ ಅದರಂತೆ ಸಾರ್ವಜನಿಕರು ಕೂಡ ಸರ್ಕಾರದ ಯೋಜನೆಗಳಿಂದಾದ ಕೆಲಸಗಳನ್ನು ಸರಿಯಾಗಿ ಉಪಯೋಗಿಸಿ ಸರ್ಕಾರ ಹಣ ವ್ಯೆಯವಾಗದಂತೆ ನೋಡಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ದೇಶದ ಅಭಿವೃದ್ದಿ ಸಾಧ್ಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.
ಪಟ್ಟಣದ ಕೆಂಗೇರಿಮಡ್ಡಿಯ 13 ನೇ ವಾರ್ಡ್ ನಲ್ಲಿ 19-20ನೇ ಸಾಲೀನ 14 ನೇ ಹಣಕಾಸಿನ ಮೂಲ ಅನುದಾನದಲ್ಲಿ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರಸ್ತೆಗೆ ಪೆವರ ಬ್ಲಾಕ ಅಳವಡಿಕೆ ಕಾಮಗಾರಿಯ ಭೂಮಿ ಪೂಜೆ ನೆರವೆರಿಸಿ ಮಾತನಾಡಿದ ಅವರು ಸರ್ಕಾರ ಪ್ರತಿವರ್ಷ ಸಾರ್ವಜನಿಕರ ಅಭಿವೃಧ್ದಿಗಾಗಿ ವಿವಿದ ಯೋಜನೆಗಳನ್ನು ತರುವ ಮೂಲಕ ಪಟ್ಟಣದ ಅಭಿವೃದ್ದಿಗೆ ಶ್ರಮಿಸುತ್ತಿದೆ. ಅದರಂತೆ ಪುರಸಭೆಯೂ ಕೂಡಾ ಸಾರ್ವಜನಿಕರ ಮೂಲ ಭೂತ ಸೌಕರ್ಯಗಳ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಅದರಂತೆ ನಾನು ಕೂಡಾ ಪುರಸಭೆಯ ಸದಸ್ಯನಾಗಿ ವಾರ್ಡ್ ನ ಜನರ ಸರ್ವಾಂಗೀಣ ಅಭಿವೃದ್ದಿಗಾಗಿ ಹೋರಾಡಲು ಸದಾ ಸಿದ್ದನಾಗಿದ್ದೇನೆ, ಅದರಂತೆ ಸರ್ಕಾರದ ಯಾವೊಂದು ಯೋಜನಗಳನ್ನು ಸಹ ನಮ್ಮ ವಾರ್ಡ್ ನ ಬಡಜನರ ಹಿತಕ್ಕಾಗಿ ಅವುಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಕಾರಣ ಒಂದು ವಾರ್ಡ್ಗಲಿ, ಪಟ್ಟಣವಾಗಲಿ ಸುಧಾರಿಸಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಬೇಕು. ಅದರಂತೆ ಸರ್ಕಾರದ ಯೋಜನೆಗಳ ಸಹ ಅರ್ಹ ಫಲಾನುಭವಿಗಳು ಪಡೆಯುವ ಮೂಲಕ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಉಪಯೋಗಿಸಿರಿ ಎಂದರು.
ಅಲ್ಲದೆ ರಸ್ತೆ ಕಾಮಗಾರಿಯೂ ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ಕಾಮಗಾರಿಯನ್ನು ಸರಿಯಾಗಿ ಮತ್ತು ನಿಗದಿತ ಸಮಯಕ್ಕೆ ಮುಗಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಹೇಳಿದರು.
ಈ ಸಂದಾರ್ಭದಲ್ಲಿ ಪ್ರಶಾಂತ ಮುಖ್ಯನ್ನವರ. ರಮಜಾನಸಾಭ ಸಣದಿ, ಕಾಶಿಮ ಹಳಿಂಗಳಿ, ನಾಗಲಿಂಗ ಬಡಿಗೇರ, ಗಂಗಪ್ಪ ದಿನ್ನಿಮನಿ, ಇಬ್ರಾಹಿಂ ಕೌಜಲಗಿ, ಸೈಯದಸಾಬ ತಟಗಾರ, ದಶಗೀರ ಬೀರಡಿ, ಅಯುಬ ಜಮಾದಾರ, ಆಸೀಮ ಕರಿಮಖಾನ, ಸಾಗರ ಪರೀಟ ಸೇರಿದಂತೆ ಹಲವರು ಇದ್ದರು.