ಬಾಗಲಕೋಟೆ೨೪: ಮನುಷ್ಯನ ನಿತ್ಯ ಜೀವನಕ್ಕೆ ಅವಶ್ಯವಾಗಿರುವ ನೀರು, ಗಾಳಿ, ಆಹಾರದಂತೆ ವಿದ್ಯುತ್ ಕೂಡಾ ಅನಿವರ್ಾವಾಗಿದ್ದು, ಇದು ಅಂಗಡಿಗಳಲ್ಲಿ ಸಿಗುವ ವಸ್ತುವಲ್ಲವಾಗಿದ್ದರಿಂದ ಹಿತ ಮಿತವಾಗಿ ಬಳಕೆಮಾಡಿಕೊಳ್ಳುವಂತೆ ಜಿ.ಪಂ ಸದಸ್ಯ ಹೂವಪ್ಪ ರಾಠೋಡ ಹೇಳಿದರು.
ಸೀಮಿಕೇರಿ ಸಮೀಪದ ಲಡ್ಡು ಮುತ್ಯಾ ಮಠದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವತಿಯಿಂದ ಆಯೋಜಿಸಲಾಗಿದ್ದ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆ, ಉಳಿತಾಯ ಕ್ರಮಗಳ ಬಗ್ಗೆ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಹಿಂದಿನ ದಿನಗಳಿಗಿಂತ ಇಂದು ವಿದ್ಯುತ್ ಸರಬರಾಜು ಸುಧಾರಿಸಿದ್ದು, ಹಿಂದೆ ಕೆ.ಇ.ಬಿ ಅಧಿಕಾರಿಗಳಾರು ಎಂಬುದು ಗೊತ್ತಿರುತ್ತಿರಲಿಲ್ಲ. ಇಂದು ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಶಾಖಾಧಿಕಾರಿಗಳನ್ನು ನೇಮಿಸಿ ವಿದ್ಯುತ್ ಕಾರ್ಯ ಚುರುಕುಗೊಳಿಸಿದ್ದು, ಸಂತಸದ ವಿಷಯವಾಗಿದೆ ಎಂದರು.
ಒಬ್ಬ ರೈತ ತನ್ನ ಜಮೀನಿನಲ್ಲಿಯ ಟಿ.ಸಿ ದುರಸ್ಥಿಗಾಗಿ 8 ರಿಂದ 10 ದಿನ ಅಲೆಡಾಡಿದರೂ ಕಾರ್ಯವಾಗುತ್ತಿವೆಂಬ ಆರೋಪಗಳು ಕೇಳಿಬರುತ್ತಿರುವದರಿಂದ ಅಂತಹ ರೈತರ ಸಮಸ್ಯೆಗಳನ್ನು ಹೆಸ್ಕಾಂ ಸಿಬ್ಬಂದಿಗಳು 24 ಗಂಟೆಗಳಲ್ಲಿ ಸರಿಪಡಿಸಿ ಕೊಡಬೇಕೆಂದರು.
ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಪ್ರಭಾವಿಗಳಾಗಿದ್ದು, ತಮ್ಮ ತಮ್ಮ ಗ್ರಾಮಗಳಲ್ಲಿ ವಿದ್ಯುತ್ ಉಪಯೋಗ ಹಾಗೂ ಅದರಿಂದಾಗುವ ಸಾಧಕ ಬಾಧಕಗಳನ್ನು ತಿಳಿಸಿ ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಹೆಸ್ಕಾಂನ ಕಾರ್ಯನಿವರ್ಾಹಕ ಅಭಿಯಂತ ಚಂದ್ರಶೇಖರ ಮಾತನಾಡುತ್ತ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯನಿವರ್ಾಹಕ ನಿದರ್ೇಶಕರು ವಿದ್ಯುತ್ದಿಂದಾಗುವ ಅವಘಡಗಳ ಕುರಿತು ಜರನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 7 ಜಿಲ್ಲೆಯಗಳ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಶಾಖೆಗಳಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಾರ್ವಜನಿಕ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿ ಗ್ರಾಹಕರೊಂದಿಗೆ ಸಮಾಧಾನ ಹಾಗೂ ತಾಳ್ಮೆಯಿಂದ ವತರ್ಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
ಗದ್ದನಕೇರಿ ಭಾಗದ ಶಾಖಾಧಿಕಾರಿ ನಾಗೇಶ್ ಮಾದರ್ ಬಾಗಲಕೋಟೆಯ ಗ್ರಾಮೀಣ ಉಪವಿಭಾಗದಲ್ಲಿ ಬರುವ ಗದ್ದನಕೇರಿ ಶಾಖೆಯಲ್ಲಿ ಒಟ್ಟು 9 ಫೀಡರ್ಗಳು 2 ಸೆಮಿ ಅರ್ಬನ್ ಫೀಡರ್ಗಳು ಕುಡಿಯುವ ನೀರಿಗಾಗಿ ಒಂದು ಫೀಡರ್ ಹೊಂದಿದ್ದು, ಒಟ್ಟು 105 ಚದರ್ ಕೀ ಮಿ ವಿಸ್ತೀರ್ಣ ಹೊಂದಿದೆ.
ಇದರಲ್ಲಿ 5 ಗ್ರಾಮ ಪಂಚಾಯತಿಗಳು ಬರುತ್ತಿದ್ದು 24 ಹಳ್ಳಿಗಳು ಒಂದು 220 ಕೆ,ವಿ ಸ್ಟೇಷನ್ ಒಂದು 110 ಕೆ,ವಿ ಸ್ಟೇಷನ್ ಒಂದು 33 ಕೆ,ವಿ ಸ್ಟೇಷನ್ 10030 ಸ್ಥಾವರಗಳು 353.15 ಎಲ್ ಟಿ ವಿದ್ಯುತ್ ಮಾರ್ಗಗಳನ್ನು ಒಳಗೊಂಡದ್ದು ಒಟ್ಟು 19 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಪ್ರಾರಂಭದಲ್ಲಿ ಶ್ರೀಶೈಲ್ ವಾಲಿಕಾರ ಪ್ರಾರ್ಥನೆ ಹೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾ.ಪಂ ಅಧ್ಯಕ್ಷೆ ಬಾಳವ್ವ ಯಂಕಂಚಿ, ಗದ್ದನಕೇರಿ ಗ್ರಾ.ಪಂ ಅಧ್ಯಕ್ಷ ಸಿದ್ದನಗೌಡ ಜಕ್ಕನಗೌಡರ, ಮುರನಾಳ ಗ್ರಾ.ಪಂ ಅಧ್ಯಕ್ಷ ಮಳಿಯಪ್ಪ ಗುಳಬಾಳ, ಕದಾಂಪುರ ಗ್ರಾ.ಪಂ ಅಧ್ಯಕ್ಷ ವಿಠ್ಠಲ ಕದಾಂಪುರ, ತಾ.ಪಂ ಸದಸ್ಯರಾದ ಮೀನಾಕ್ಷಿ ಹಲಕುಕರ್ಿ, ಮಂಜುನಾಥ ಬಾರಕೇರ, ಸೀಮಿಕೇರಿ ಗ್ರಾ.ಪಂ ಉಪಾದ್ಯಕ್ಷೆ ಕವಿತಾ ಹೊರಕೇರಿ ಉಪಸ್ಥಿತರಿದ್ದರು. ಕಲಾದಗಿ ಶಾಖಾಧಿಕಾರಿ ಜಿ.ಬಿ ಛಬ್ಬಿ ಸ್ವಾಗತಿಸಿದರು ಈರಣ್ಣ ಹೊಟ್ಟಿ ವಂದಿಸಿದರು. ಎಂ ಎಸ್ ಬೆಪಾರಿ ನಿರೂಪಿಸಿದರು.