ನಿಸರ್ಗ ಬಣ್ಣದ ಮಣ್ಣಿನ ಗಣಪತಿ ವಿಗ್ರಹ ಬಳಸಿ: ಶಾಸಕ ರೆಡ್ಡಿ


ಲೋಕದರ್ಶನ ವರದಿ

ಬಳ್ಳಾರಿ07: ಪರಿಸರದ ಮೇಲೆ ಪಿಓಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮತ್ತು ರಾಸಾಯನಿಕ ಬಣ್ಣದಿಂದ ಆಗುತ್ತಿರುವ ದುಷ್ಪರಿಣಾಮ ತಪ್ಪಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಮಣ್ಣಿನಿಂದ ತಯಾರಿಸಿದ ಮತ್ತು ನಿಸರ್ಗದ ಬಣ್ಣಗಳಿಂದ ಲೇಪಿತವಾದ ಗಣೇಶ ವಿಗ್ರಹಗಳನ್ನು ಮಾತ್ರ ಬಳಿಸೋಣ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಹೇಳಿದರು. ಈ ಕುರಿತು ಪತ್ರಿಕಾಪ್ರಕಟಣೆ ನೀಡಿರುವ ಅವರು ಹಬ್ಬಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ದೇಶದ ಸ್ವತಂತ್ರಹೋರಾಟಕ್ಕೆ ಮಹತ್ವದ ಪರಿಣಾಮ ಬೀರಿದ್ದ ಹಿಂದೂಗಳ ಮಾಹನ್ ಹಬ್ಬ ಗಣೇಶನ ಹಬ್ಬ. 

ವಿಘ್ನನಿವಾರಕನ ಹಬ್ಬವನ್ನು ವೈಭವ ಮತ್ತು ಶ್ರಧ್ದಾ ಭಕ್ತಿಯಿಂದ ಆಚರಿಸುತ್ತಾ ಬಂದಿದೆ. ನಗರದಲ್ಲಿ ಈ ಬಾರಿಯೂ ಗಣೇಶ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸೋಣ.

 ಅದಕ್ಕಾಗಿ ಪಿಓಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶನ ಮೂತರ್ಿಗಳನ್ನು ತರುವುದು ಕೈಬಿಟ್ಟು ನಗರದ ಕುಂಬಾರ ಓಣಿಯಲ್ಲಿ ತಯಾರು ಮಾಡಿರುವ ಮಣ್ಣಿನ ಗಣಪತಿಗಳನ್ನ ಬಳಿಸೋಣವೆಂದು ಸಾರ್ವಜನಿಕರಲ್ಲಿ ಶಾಸಕರು ಪತ್ರಿಕಾಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.