ಉರುಸು ;ಜನರನ್ನು ರಂಜಿಸಿದ ಕಲಾವಿದರು

ಉರುಸು ;ಜನರನ್ನು ರಂಜಿಸಿದ ಕಲಾವಿದರು Urusu; Artists who entertained the people

ಲೋಕದರ್ಶನ ವರದಿ 

ಹೂವಿನ ಹಡಗಲಿ 11:  ಮಲ್ಲಿಗೆ ನಾಡಿನ ಪ್ರಸಿದ್ಧ ರಾಜಬಾಗ್ ಸವಾರ್ ಯಮನೂರುಸ್ವಾಮಿ ಉರುಸ್ ಪ್ರಯುಕ್ತ ಚಂದನಾ ಕಲಾ ಬಳಗದಿಂದ ವತಿಯಿಂದ ರಸಮಂಜರಿ ಕಾರ್ಯಕ್ರಮ ಜನಮನ ಸೂರೆಗೊಂಡಿತು.ಚಂದನಾ ಕಲಾ ಬಳಗದ ಗಾಯಕರಾದ ಎ ಎಂ ಪಿ ಪ್ರಶಾಂತ್, ಜಡೇಶ್, ನಾಗೇಶ್,ಮದನ್, ಸಿದ್ದಾರ್ಥ, ವಿಜಯ್ ಅಕ್ಕಸಾಲಿ,ಎಂ ಡಿ ಗೌಸ್ ಗಾಯಕಿಯರಾದ ಜ್ಯೋತಿ, ಉಷಾ ಕನ್ನಡ ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದರು.ಚಿತ್ರಕಲಾವಿದ ಸಂತೋಷಗೌಡ್ರು ಟಿಪ್ಪು ಸುಲ್ತಾನ್ ಹುಲಿಯೊಂದಿಗೆ ಹೋರಾಡುವ ಮನಮೋಹಕ ಚಿತ್ರವನ್ನು ಸ್ಥಳದಲ್ಲೇ ಬರೆದು ಪ್ರದರ್ಶಿಸಿದರು.

ಹಾಸ್ಯ ನಟ ಸರ್ದಾರ್ ಶಂಭುನಾಥ ವಿವಿಧ ಹಾಸ್ಯ ಚಟಾಕಿಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.ಕನ್ನಡದ ಹೆಸರಾಂತ ನಟರಾದ ಡಾ ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಷ್ ರವಿಚಂದ್ರನ್ ಅವರ ನಟನೆಯನ್ನು ಸೊಗಸಾಗಿ ಅನುಕರಣೆ ಮಾಡಿ ಪ್ರೇಕ್ಷಕ ಅಭಿಮಾನಿಗಳ ಮನ ಗೆದ್ದರು.ಚಂದನಾ ಕಲಾ ಬಳಗದ ಮುಖ್ಯಸ್ಥ ಎ ಎಂ ಪಿ ಪ್ರಶಾಂತ್ ರವರನ್ನು ಉರುಸ್ ಕಮಿಟಿ ವತಿಯಿಂದ ಗೌರವಿಸಲಾಯಿತು.ಕಮಿಟಿ ಗೌರವಾಧ್ಯಕ್ಷ ಕಾಗದ ಗೌಸ್ ಮೊಹಿದ್ದೀನ್, ಮುಖಂಡರಾದ ಪಿ ಶಫಿವುಲ್ಲಾ,ಕಲೆಗಾರ ನಜೀರ್ ಅಹಮದ್,ಕೊಟ್ಟೂರ್ ಗೌಸ್, ದಾದಾ ಸಾಹೇಬ್, ಕಡ್ಲಿ  ಪೀರ್ ಸಾಬ್ ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ವೀರೇಶ್ ಕಲ್ಮಠ ಇತರರು ಉಪಸ್ಥಿತರಿದ್ದರು.