ಕೆರೂರ 22: ಇಲ್ಲಿನ ಸುಪ್ರಸಿದ್ಧ ಸೂಫಿ ಸಂತ ಹಾಗು ತಮ್ಮ ಪವಾಡಗಳಿಂದ ಹೆಸರುವಾಸಿಯಾದ ಸುಮಾರು 200 ವರ್ಷಗಳ ಇತಿಹಾಸ ಇರುವ ಹಜರತ್ ಶೇರಖಾನಲಿ ರಹಮತುಲ್ಲಾ ಅಲೈಹಿಯವರ ಉರೂಸ್ ಅತ್ಯಂತ ಅದ್ಧೂರಿಯಾಗಿ ಜರುಗಿತು.
ಹಿಂದೂ ಮುಸ್ಲಿಂ ಭಾವೈಕ್ಯ ಸ್ಥಳವಾದ ಇಲ್ಲಿ, ಎಲ್ಲರೂ ಸೇರಿ ತಮ್ಮ ಶ್ರದ್ಧೆಯಿಂದ ಮಾಲದಿ, ಸಕ್ಕರೆ, ಎಣ್ಣೆ, ಹೂ ಇತ್ಯಾದಿ ಸಲ್ಲಿಸಿದರು. ಈ ದರ್ಗಾದ ಅನುಯಾಯಿಗಳಾದ ಸೂರಿ ಮನೆತನದವರು ಗಂಧವನ್ನು ಏರಿಸಿದರೆ, ಮತ್ತೊಬ್ಬ ಅನುಯಾಯಿಗಳಾದ ಹೆಬ್ಬಳ್ಳಿ ಮನೆತದವರು ಅನ್ನಸಂತರ್ಪಣೆ ಏರ್ಪಡಿಸಿದ್ದರು. ಉರೂಸ್‌ನ ನೇತೃತ್ವ ಚೋರಗಸ್ತಿ ಜಮಾತ್ ನವರು ನಡೆಸಿದರು. ಈ ದರ್ಗಾದ ಸಜ್ಜಾದತನವನ್ನು ಮಹಮ್ಮದ ಮುಲ್ಲಾರವರು ಮಾಡುತ್ತಾ ಬಂದಿರುತ್ತಾರೆ.
ಈ ಸಂದರ್ಭದಲ್ಲಿ ಹಿರಿಯರಾದ ಜನಾಬ ನೂರಸಾಬ ಚೋರಗಸ್ತಿ, ನೌಜವಾನ ಸೀರತ್ ಕಮೀಟಿ ಅಧ್ಯಕ್ಷ ರಾದ ಮೋದಿನ ದೋಡಕಟ್ಟಿ ಉಪಾಧ್ಯಕ್ಷ ರಾದ ಇಸ್ಮಾಯಿಲ್ ಮುಲ್ಲಾ ,ಕಾರ್ಯದರ್ಶಿ ಉಮರಫಾರೂಕ ಪೆಂಡಾರಿ,ಸಾಹೇಬಲಾಲ ಬೇಪಾರಿ ,ಕರಿಮಸಾಬ ದೊಡಮನಿ,ಅಬ್ದುಲರಜಾಕ ಟಪಾಲ ಉಪಸ್ಥಿತರಿದ್ದರು. ಕುರಾನ ಪಠನವನ್ನು ಕೆರೂರನ ಪೇಶಿಮಾಮರಾದ ಸೈಯದ್ ವಾಸೀಮ ಖಾಜಿ ನೇರವೇರಿಸಿದರು.