ಶೀಘ್ರವಾಗಿ ಕಛೇರಿಗಳನ್ನು ಪ್ರಾರಂಭಿಸಲು ಶಾಸಕರಿಗೆ ಒತ್ತಾಯ

ರಬಕವಿ-ಬನಹಟ್ಟಿ03 : ಅಧಿಕೃತವಾಗಿ ನೂತನ ತಾಲೂಕು ರಚನೆಯಾಗಿ ಆರು ವರ್ಷಗಳು ಕಳೆದರು ತಾಲೂಕಿಗೆ ಇರಬೇಕಾದ ಕೇಂದ್ರ ಕಛೇರಿಗಳು ಇನ್ನು ಪ್ರಾರಂಭವಾಗಿಲ್ಲಾ ಎಂದು ರಬಕವಿ-ಬನಹಟ್ಟಿ ತಾಲೂಕು ಹೋರಾಟ ಹಾಗೂ ರಚನಾ ಸಮೀತಿ ರಾಮಪೂರ ಸನೀಲಕಂಠೇಶ್ವರ ಮಠದಲ್ಲಿ ಸಾರ್ವಜನಿಕವಾಗಿ ಸಭೆ ನಡೆಸಿ ಆಗ್ರಹಿಸಿದೆ.

ಈಗಾಗಲೆ ರಬಕವಿ-ಬನಹಟ್ಟಿ ಪ್ರತ್ಯೇಕ ತಾಲೂಕು ಕೇಂದ್ರವಾಗಿ ಬಿಂಬಿಸಿಕೊಂಡು ಆರು ವರ್ಷಗಳು ಕಳೆದರು ಕೂಡಾ ಇಲ್ಲಿನ ಕಛೇರಿಗಳನ್ನು ಆಡಳಿತಕ್ಕೆ ತರಲು ಸಂಭಂದಿಸಿದ ಇಲಾಖೆ ಕಾಲಹರಣ ಮಾಡುತ್ತಿದೆ. ತಾಲೂಕು ಆಡಳಿತ ಕಛೇರಿಯಲ್ಲಿ ಸಿಗುವ ಸೌಲಭ್ಯಗಳು ಇಲ್ಲಿ ದೊರಕದೆ ನಗರ ಹಾಗೂ ಸುತ್ತಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಅನ್ಯಾಯವಾಗುವುದಲ್ಲದೆ, ರೈತರು, ನೇಕಾರರು ವಂಚಿತರಾಗುತ್ತಿದ್ದಾರೆ. ಈ ತಾಲೂಕಿಗೆ ಸಧ್ಯದಲ್ಲಿ ಬೇಕಾಗಿರುವ ಉಪ ನೋಂದನಾ ಕಛೇರಿ, ಬಿಇಓ ಕಛೇರಿ ತಾಲೂಕಿನ ಆಡಳಿತಕ್ಕೆ ಅತೀ ಅವಶ್ಯವಾಗಿದ್ದು ಸಂಭಂದಿಸಿದ ಇಲಾಖೆಗಳ ಜೊತೆಗೆ ಮಾತನಾಡಿ ಪ್ರಾರಂಭಿಸಬೇಕು ಮತ್ತು ಸಧ್ಯದಲ್ಲಿ ನಡೆಯುವ ರಾಜ್ಯದ ಬಜೆಟ್ ಮಂಡಣೆಯಲ್ಲಿ ರಬಕವಿ-ಬನಹಟ್ಟಿ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಬೇಡಿಕೆಯಾಗಿ ಧ್ವನಿ ಎತ್ತಬೇಕು ಎಂದು ತಾಲೂಕು ಹೋರಾಟ ಸಮಿತಿಯಿಂದ ಒತ್ತಾಯಿಸಿ ಶಾಸಕ ಸಿದ್ದು ಸವದಿ ಅವರಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಂಕರ ಸೊರಗಾಂವಿ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಪ್ರೊ. ಬಸವರಾಜ ಕೊಣ್ಣೂರ, ರಾಮಣ್ಣ ಹುಲಕುಂದ, ದುಂಡಪ್ಪ ಮಾಚಕನೂರ, ಧರೆಪ್ಪ ಉಳ್ಳಾಗಡ್ಡಿ, ಗಣಪತರಾವ್ ಹಜಾರೆ, ಮಲ್ಲಿಕಾಜರ್ುನ ನಾಶಿ, ಮಹಾದೇವ ಧೂಪದಾಳ, ಪರಪ್ಪ ಉರಭಿನವರ, ನಂದು ಗಾಯಕವಾಡ, ಎಂ. ಎಸ್. ಬದಾಮಿ, ಶೇಖರ ಕೊಟ್ರಶೆಟ್ಟಿ, ಈಶ್ವರ ನಾಗರಾಳ, ಪಂಚಾಕ್ಷರಿ ಹಿರೇಮಠ, ಬಾಬು ನಡುವಿನಮನಿ, ಮಹಾದೇವ ಕೋಟ್ಯಾಳ, ಬಸವರಾಜ ಮನ್ಮಿ, ಯಲ್ಲಪ್ಪಾ ತಳವಾರ, ಈಶ್ವರ ಕಾಡದೇವರ, ಜಯಪ್ರಕಾಶ ಸೊಲ್ಲಾಪುರ ಸೇರಿದಂತೆ ಅನೇಕರಿದ್ದರು.