ವಿಜಯಪುರ 19: ನೀರು ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕಾನ್ಫೆರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಅಖಇಆಂಋ), ವಿಜಯಪುರ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವಿಜಯಪುರ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ರೇಡೈ ಜಿಲ್ಲಾಧ್ಯಕ್ಷ ಮಹಾವೀರ ಪಾರೇಕ ಮಾತನಾಡಿ, ನಮ್ಮದು ರಿಯಲ್ ಎಸ್ಟೇಟ್ ಉದ್ಯಮದ ಭವಿಷ್ಯವನ್ನು ರೂಪಿಸಲು ಮೀಸಲಾಗಿರುವ ವೃತ್ತಿಪರರ ಕ್ರಿಯಾತ್ಮಕ ಜಾಲವಾಗಿದೆ. ವಿಜಯಪುರ ಜಿಲ್ಲಾ ಎಲ್ಲಾ ಲೇಓಟನಲ್ಲಿ ನೀರಿನ ವ್ಯವಸ್ಥೆ ಸರಿಯಾಗಿ ಮಾಡಿರುವುದಿಲ್ಲ. ಗುಂಟಾ ಪ್ಲಾಟಗಳಲ್ಲಿ ನೀರಿನ ಸೌಲಭ್ಯ ಒದಗಿಸಿದರೂ, ನಮ್ಮ ಎನ್.ಎ. ಪ್ಲಾಟ್ ಡೆವಲಪ್ಮೆಂಟ್ ವತಿಯಿಂದ ಸರ್ಕಾರಿ ಖರ್ಚು ವೆಚ್ಚಗಳನ್ನು ವೆಚ್ಚ ಭರಿಸಿದ್ದರೂ ಸಹ ನಮಗೆ ಸರಿಯಾಗಿ ನೀರು ನೀಡದಿರುವುದು ಸಮಸ್ಯೆಯಾಗಿದೆ. ಕೂಡಲೇ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ನಮ್ಮ ಸಂಸ್ಥೆಯು ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸಿ ಅವರ ಬೆಳವಣಿಗೆಗೆ ಮತ್ತು ಅವರ ಏಳ್ಗೆಯನ್ನು ಹೊಂದಲು ಕಾರ್ಯಕೈಗೊಳ್ಳಲಾಗುತ್ತಿದೆ. ನಮ್ಮ ಶ್ರೇಣಿಯಲ್ಲಿ ಸಹಯೋಗ, ನಾವೀನ್ಯತೆ ಮತ್ತು ಶ್ರೇಷ್ಠತೆಯನ್ನು ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಆದ ಕಾರಣ ನೀರಿನ ಸಮಸ್ಯೆಯನ್ನು ತಕ್ಷಣ ಪೂರೈಸಬೇಕೆಂದು ಹೇಳಿದರು.
ಈ ಸಂದರ್ಭ ಕಾರ್ಯದರ್ಶಿ ಮುಖೇಶ ಮೆಹ್ತಾ, ವಿಮಲ ಶಹಾ, ಖಜಾಂಚಿ ವಿನಯ ರುಣವಾಲ್, ಶರದ್ ರೋಡಗಿ, ಅನುಪಮ ರುಣವಾಲ, ರಾಜೇಂದ್ರ ರುಣವಾಲ, ಸಲೀಂ ಪಠಾಣ, ಎಮ್.ಎಮ್. ಶಾರಾ್ಯದೆ, ಅಮೃತ ಪೋರವಾಲ, ಮೆಹಬೂಬ ಅಥಣಿ, ಮನಿಷ್ ಪಾರೇಕ, ದಿನೇಶ ತೋಸನಿವಾಲ, ಅನೀಲ ಅವಳೆ, ಸಚೀನ ಬೊಂಬಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.