ನಗರ ಸ್ವಚ್ಛತೆಗೆ ಪೌರಕಾಮರ್ಿಕರ ಶ್ರಮ ಮಹತ್ವದ್ದು: ಹಾಲಪ್ಪ

ಲೋಕದರ್ಶನ ವರದಿ 

ಯಲಬುಗರ್ಾ 27: ನಗರ ಸ್ವಚ್ಚವಾಗಿರಲು ಹಾಗೂ ಜನತೆ ನೆಮ್ಮದಿಯ ಜೀವನ ಕಳೆಯುವಲ್ಲಿ ಪೌರ ಕಾಮರ್ಿಕರ ಶ್ರಮ ಅತ್ಯಂತ ಪ್ರಮುಖವಾದ್ದು ಆದ್ದರಿಂದ ಅವರಿಗೆ ಸೀಗಬೇಕಾದಂತಹ ಎಲ್ಲಾ ಸೌಲಭ್ಯಗಳನ್ನ ಒದಗಿಸಲಾಗುವದು ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ನಗರದ ಬಯಲು ರಂಗ ಮಂದಿರದಲ್ಲಿ ನಡೆದ 70ನೇ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಸ್ಥಳೀಯ ಪೌರ ಕಾಮರ್ಿಕರ ಮನೆಗಳಿಗೆ ಉಚಿತ ನೀರು ಸರಬರಾಜು ಸಂಪರ್ಕಕ್ಕೆ ಕಛೇರಿ ಆದೇಶ ಪತ್ರಗಳನ್ನು  ನೀಡಿ ಅವರು ಮಾತನಾಡಿದರು,

ಪ್ರತಿಯೊಬ್ಬ ಪೌರ ಕಾಮರ್ಿಕರ ಮನೆಗಳಿಗೆ ನಲ್ಲಿಗಳನ್ನು ಹಾಕಲಾಗುತ್ತದೆ ಅದರಿಂದ ನಿಮಗೆ ತುಂಬಾ ಅನುಕೂಲವಾಗಲಿದೆ ಎಂದರು.

ನಂತರ ಮಾತನಾಡಿದ ಪಪಂ ಮುಖ್ಯಾಧಿಕಾರಿ ನಾಗೇಶ, ನಮ್ಮ ಸಿಬ್ಬಂದಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನ ಅವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ, ಅದರಂತೆ ಇಂದು ನಳಗಳ ಜೋಡಣೆಗೆ ಶಾಸಕರಿಂದ ಚಾಲನೆ ನೀಡಲಾಗಿದೆ ಅದರ 14ಜನರು ಸಿಬ್ಬಂದಿಗಳು  ಸದುಪಯೋಗ ಪಡಿಸಿಕೊಳ್ಳಿ ಎಂದರು. ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಪಪಂ ಸರ್ವ ಸದಸ್ಯರು ಹಾಗೂ ಮುಖಂಡರು, ಅಧಿಕಾರಿಗಳು ಹಾಜರಿದ್ದರು.