ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅವ್ಯವಹಾರ ನಡೆದಿಲ್ಲ: ಬಾಬಣ್ಣ

ಲೋಕದರ್ಶನ ವರದಿ

ರಾಣೇಬೆನ್ನೂರು12: ಸ್ಥಳೀಯ  ಮಹಿಷಾಸುರ ಮಧರ್ಿನಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ಈ ಹಿಂದಿನ ವ್ಯವಸ್ಥಾಪಕರು 34,22,660 ರೂ.ಗಳ ಹಣವನ್ನು  ದುರುಪಯೋಗ ಪಡಿಸಿಕೊಂಡಿದ್ದು, 2017-18 ರ ಲೆಕ್ಕಪರಿಶೋಧನೆ ವರದಿಯಿಂದ ಬೆಳಕಿಗೆ ಬಂದಿದೆ. ಸೊಸೈಟಿ ಮತ್ತು ಶೇರುದಾರರ ಹಿತದೃಷ್ಠಿಯಿಂದ ಆರೋಪಿಯ ಮೇಲೆ ಶಹರ ಪೊಲೀಸ್ ಠಾಣೆಯಲ್ಲಿ ಸೆ.7 ರಂದು ಕ್ರಿಮಿನಲ್  ಪ್ರಕರಣ ದಾಖಲಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಿ.ಎಸ್.ಕಾವಡೆ ಹೇಳಿದರು.

ಗುರುವಾರ ಸೊಸೈಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಪ್ರಕರಣ ಬೆಳಕಿಗೆ ಬರಲು ದಾವಣಗೇರಿಯ ಖಾಸಗಿ ಲೆಕ್ಕಪರಿಶೋಧನಾ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. ಸಹಕಾರಿ ಇಲಾಖೆಯ ಸೂಚನೆಯ ಮೇರೆಗೆ ಹಣ ಮತ್ತು ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಿದ್ದು, ಈಗಾಗಲೇ ಆರೋಪಿತನು 18ಲಕ್ಷರುಗಳನ್ನು ಸೊಸೈಟಿಗೆ ತುಂಬಿದ್ದಾನೆ. ಉಳಿದ ಹಣವನ್ನು ಬಡ್ಡಿ ಸಮೇತ ತುಂಬಲಿದ್ದಾನೆ. ಆದರೂ ಸಹ ಆರೋಪಿತನ  ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು. 

   ಇದರಲ್ಲಿ ಸೊಸೈಟಿಯ ಕೆಲವು ನಿದರ್ೇಶಕರು ಸುಳ್ಳು ಮತ್ತು ಸೊಸೈಟಿಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಸಂಘದ ಹೆಸರು ಹಾಳು ಮಾಡುವ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸೊಸೈಟಿಯ ವಿರುದ್ಧ ಅಪಪ್ರಚಾರ ಮಾಡಲು ಮುಂದಾದವರ  ಮೇಲೂ ಸಹ ಕಾನೂನು ಕ್ರಮ ಕೈಗೊಳ್ಳಲಾಗುವುದು. 

   ಇಂತಹ ಅಪಪ್ರಚಾರದ ವದಂತಿಗೆ ಶೇರುದಾರರು ಕಿವಿಗೊಡಬಾರದು ಎಂದವರು ವಿನಂತಿಸಿದ್ದಾರೆ.  ಸೊಸೈಟಿಯ ನಿದರ್ೇಶಕರಾದ ನಾಗೇಶ ಕುಂದಾಪುರ, ನರಸಿಂಹ ಮೋರೇರ, ಚಂದ್ರು ಕುಂದಾಪುರ, ವ್ಯವಸ್ಥಾಪಕಿ ಸುಜಾತಾ ಮತ್ತಿತರರು  ಇದ್ದರು