ತಾಳಿಕೋಟಿ 14: ಪಟ್ಟಣದಲ್ಲಿ ಫೆಬ್ರವರಿ 21ರಿಂದ 23ರ ವರೆಗೆ ನಡೆಯಲಿರುವ ಸಾರ್ವಜನಿಕ ಕುರಆನ್ ಪ್ರವಚನ ಕಾರ್ಯಕ್ರಮದ ಭಿತ್ತಿ ಪತ್ರ ( ಪೋಸ್ಟರ್) ಗಳನ್ನು ಗುರುವಾರ ಪ್ರವಚನ ಕಾರ್ಯಾಲಯದಲ್ಲಿ ಅನಾವರಣಗೊಳಿಸಲಾಯಿತು.
ಈ ವೇಳೆ ಪೂಜ್ಯ ಶ್ರೀ ಶರಣಪ್ಪ ಮುತ್ಯಾ ಶರಣರ,ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಹಿರಿಯ ಪತ್ರಕರ್ತ ಜಿ.ಟಿ. ಘೋರೆ್ಡ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ್ ಹಜೇರಿ,ವಸಾಪ ಅಧ್ಯಕ್ಷ ಮಹಾಂತೇಶ ಮುರಾಳ, ಎ.ಕೆ.ನಮಾಜಕಟ್ಟಿ,ಎಂ.ಎ.ಮೇತ್ರಿ, ಸಂಚಾಲಕ ಸೈಯದ್ ಇರ್ಫಾನ್ ಖಾಜಿ, ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಮತ್ತಿತರರು ಇದ್ದರು.