ಧಾರವಾಡ 29:ಕನ್ನಡದ ಭೀಷ್ಮ ಎಂದುಖ್ಯಾತರಾಗಿದ್ದ ಸಕ್ಕರಿ ಬಾಳಾಚಾರ್ಯರ ಶಾಂತಕವಿಗಳು ಐವತ್ತು ವರ್ಷಗಳ ಕಾಲ ಕನ್ನಡಕಟ್ಟುವಲ್ಲಿ ಪಟ್ಟ ಪ್ರಯತ್ನಗಳು ಭಗೀರಥ ಪ್ರಯತ್ನಗಳಾಗಿದ್ದವು ಎಂದು ವಿಶ್ರಾಂತಗ್ರಂಥಪಾಲಕ ಶಿವನಗೌಡ ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಕವಿಗಳ ಹೆಸರಿನಲ್ಲಿ ನಡೆಸುತ್ತಿರುವ ಶಾಂತೇಶ ವಾಚನಾಲಯದಲ್ಲಿ ಅಳವಡಿಸಿದ ಶಾಂತಕವಿಗಳ ಪರಿಚಯ ಫಲಕ ಅನಾವರಣಗೊಳಿಸಿ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ ಕನ್ನಡದಲ್ಲಿ ನಾಟಕಗಳು, ಕೀರ್ತನಗಳಿಲ್ಲದ ಹೊಸಗನ್ನಡದ ಸಂಧಿಕಾಲದಲ್ಲಿ ಕನ್ನಡದಲ್ಲಿ ನಾಟಕಗಳನ್ನು, ಕೀರ್ತನೆಗಳನ್ನು ಬರೆದು, ಕರ್ನಾಟಕದತುಂಬ ಇವುಗಳ ರಂಗಪ್ರಯೋಗ ಮಾಡಿಕನ್ನಡಾಭಿಮಾನ ಮೂಡಿಸಿ,ಕನ್ನಡದಅಲೆಯನ್ನು ಸೃಷ್ಟಿಸಿದ ಕನ್ನಡದ ಕಟ್ಟಾಳು ಶಾಂತಕವಿಗಳು.
ಶಾಲಾ ಶಿಕ್ಷಕರಾಗಿದ್ದ ಇವರು ಕನ್ನಡಿಗರಿಗೆ ಆತ್ಮಾಭಿಮಾನದ ಪಾಠ ಕಲಿಸಿದರು. 1918ರಲ್ಲಿ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನದ ನಾಲ್ಕನೇ ಅಧಿವೇಶನವನ್ನು ಆಯೋಜಿಸಿದಾಗ ಇದಕ್ಕಾಗಿ ಜವಾಬ್ದಾರಿ ಹೊತ್ತುಕೊಂಡು ಆರ್ಥಿಕ ತೊಂದರೆಯಾದಾಗ ಮನೆಮನೆಯಕದತಟ್ಟಿ ಬೇಡಲು ಬಂದಿಹ ಕನ್ನಡದದಾಸಯ್ಯ ಎಂದು ಹೇಳುತ್ತ ಧನ ಸಂಗ್ರಹಿಸಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದವರು. ಇವರ ಕನ್ನಡ ಕೊಡುಗೆಯಧ್ಯೋತಕವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅವರ ಹೆಸರಿನಲ್ಲಿ ಶಾಂತೇಶ ವಾಚನಾಲಯ ನಡೆಸುತ್ತಿದೆಎಂದರು.ಈ ಸಂದರ್ಭದಲ್ಲಿ ಸಂಘದ ಸಹಕಾರ್ಯದರ್ಶಿ ಶಂಕರ ಕುಂಬಿ, ಕಾರ‌್ಯಕಾರಿ ಸಮಿತಿ ಸದಸ್ಯರಾದಡಾ.ಶೈಲಜಾಅಮರಶೆಟ್ಟಿ, ಡಾ.ಮಹೇಶ ಹೊರಕೇರಿ ಮತ್ತು ಶಿವಾನಂದ ಭಾವಿಕಟ್ಟಿ, ಎಸ್. ವಿ.ಅಯ್ಯನಗೌಡರ, ‘ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ ಟ್ರಸ್ಟಿನ ಪರವಾಗಿ ಹಣುಮೇಶ ಸಕ್ರಿ, ಶ್ರೀಶೈಲ ಕಮತರ, ಪ್ರಭು ಹಂಚಿನಾಳ, ಗದಿಗೆಯ್ಯ ಹಿರೇಮಠ, ಎಸ್.ಎಂ.ರಾಚಯ್ಯನವರ, ಎಸ್.ಆಯ್. ಭಾವಿಕಟ್ಟಿ, ಆರ್.ಬಿ. ಪಟ್ಟಣಶೆಟ್ಟಿ, ಅಭಿಷೇಕ ಸಿದ್ದಲಿಂಗ ದೇಸಾಯಿಸೇರಿದಂತೆಅನೇಕರಿದ್ದರು.