ಚಿಕ್ಕೋಡಿ 16: ದಿ. ಫೆಬ್ರುವರಿ 14 ಮತ್ತು 15 ರಂದು ಆಯ್ದ ಗ್ರಾಮಗಳಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಜಾಗೃತಿ ಬೀದಿ ನಾಟಕ ಪ್ರದರ್ಶನ ಜರುಗಿತು.
ಭೋರಗಾಂವ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿಂಟು ಕಾಂಬಳೆ ಇವರು ವಾದ್ಯ ನುಡಿಸಿ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿಗಳಾದ ಎಸ್ ಎಸ್ ಬಿ ತೋಡಕರ ಇವರು ಮಾತನಾಡಿ ಅಸ್ಪೃಶ್ಯತೆ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು, ಸಮಾನತೆಯಿಂದ ಬದುಕಿದರೆ ಪ್ರಗತಿ ನಾಡಕಟ್ಟಬಹುದು ಎಂದರು. ಹಾಗೇನೆ ಮಕ್ಕಳಲ್ಲಿ ಶಿಕ್ಷಣ ಪ್ರಜ್ಞೆ ಮೂಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ರಾಹುಲ್ ಗುಡೆನಕರ, ಸಂದೀಪ ವಾಹಿಂಗಡೆ ಪೋಪಣ್ಣ ಕುರುಳೆ, ಮಹಾದೇವ್ ಬ್ರಿಂಗಿಮಠ, ಜಯಪಾಲ ನೇಜೆ ಉಪಸ್ಥಿತರಿದ್ದರು. ಅಶಾದೀಪ ಸಮುದಾಯ ಕಲಕೇಂದ್ರ ಚಿಕ್ಕೋಡಿ ಕಲಾತಂಡದವರು ನಮ್ಮ ಬದುಕು ನಮ್ಮ ಹಕ್ಕು ಬೀದಿ ನಾಟಕ ಪ್ರದರ್ಶನ ನೀಡಿ ಸಮುದಾಯ ಹಾಗೂ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅರಿವು ಮೂಡಿಸಿದರು. ಬೇಡಿಕೆ ಹಾಳ ವಸತಿ ನಿಲಯದ ವಾರ್ಡನ್ ಮೆಕ್ಕಳಕಿಯವರು ಸ್ವಾಗತಿಸಿದರು. ಭರತ್ ಕಲಾಚಂದ್ರ ನಿರೂಪಿಸಿದರು. ಪ್ರಕಾಶ್ ಜನಮಟ್ಟಿ ವಂದಿಸಿದರು. ಇದೇ ಕಲಾ ತಂಡದವರು ಚಾಂದ್ ಶಿರಧವಾಡ, ಭೋಜ, ಅಪ್ಪಾಚಿವಾಡಿ, ಗಳತಗಾ, ಸಿದ್ನಾಳ, ವಿವಿಧ ಗ್ರಾಮಗಳಲ್ಲಿ ಅರಿವು ಮೂಡಿಸಿದರು.