ಬಾಗಲಕೋಟೆ೨೩: ಮೂಧೋಳ ತಾಲೂಕಿನ ತಾಲೂಕಾ ಮಟ್ಟದ ಕಛೇರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಛೇರಿಗೆ ಭೇಟಿ ನೀಡಿದ ವಿದ್ಯಾರ್ಥಿಗಳ ಶಿಷ್ಯ ವೇತನದ ಆಧಾರ ಸಿಡಿಂಗ್ ಬಗ್ಗೆ ತುರ್ತು ಕ್ರಮ ವಹಿಸಲು ಮತ್ತು ಶಿಕ್ಷಕರುಗಳಿಗೆ ಜ್ಯೋತಿ ಸಂಜೀವಿನಿ ಕಾರ್ಡ ಮುದ್ರಣದಲ್ಲಿ ಅವ್ಯವಹಾರ ಕುರಿತು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿದರು. ಪೂವರ್ಾನುಮೋದನೆ ಪಡೆಯದೆ ಗೈರು ಹಾಜರಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಕ್ರಮ ಕೈಗೊಳಲು ಸೂಚಿಸಿದರು.
ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಪ್ರಧಾನ ಮಂತ್ರಿ ಕಿಸಾನ ಯೋಜನೆಯಡಿ ಶೇ 90 ರಷ್ಟು ಪ್ರಗತಿಯಾಗಿದ್ದು ಇಲಾಖಾ ಸೌಲಭ್ಯಗಳನ್ನು ಹೆಚ್ಚಿಸಿ ರೈತರುಗಳ ನೋಂದಣಿಯನ್ನು ಶೀಘ್ರವಾಗಿ ಮಾಡಲು ನಿದೇಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳೇ ಸ್ಪಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಉತ್ತಮ ಹಂತಕೆ ತರುವ ಕಾರ್ಯ ಮಾಡುವಂತೆ ತಿಳಿಸಿದರು.
ತಾಲೂಕಾ ವೈದ್ಯಾಧಿಕಾರಿಗಳ ಆಸ್ಪತ್ರಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಯೊಂದು ವಿಭಾಗಗಳಿಗೆ ತೆರಳಿ ರೋಗಿಗಳ ಕುಂದು ಕೊರತೆ ಆಲಿಸಿದರು. ಮತ್ತು ಕಛೇರಿಯ ನಗದು ಪುಸ್ತಕದಲ್ಲಿ ಲಭ್ಯವಿರುವ ಶಿಲ್ಕಿನ ಹಣ ರೂ.16,64,481ಗಳ ಕುರಿತು ವಿವರಣೆ ನೀಡಲು ಶಿಶು ಅಭಿವೃಧಿ ಯೋಜನಾಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದರು. ಹಾಗೂ ಇನ್ನು ಮುಂದೆ ಪ್ರತಿ ತಾಲೂಕಿನ ತಾಲೂಕಾ ಕಛೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಒಂದು ವೇಳೆ ನ್ಯೂನ್ಯತೆ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದು ಸಿಇಓ ಕಟ್ಟುನಿಟ್ಟಿನ ಸೂಚನೆ ನೀಡಿದರು