ತಡೆಗೋಡೆಯಿಲ್ಲದ ಅಮ್ಮಾಜಿ ಕೆರೆ : ಅಪಾಯಕ್ಕೆ ಆಹ್ವಾನ ಸಂತೋಷ ರಾಯ್ಕರ


ಮುಂಡಗೋಡ; ಪಟ್ಟಣದ ಹೊರವಲಯದಲ್ಲಿರುವ ಮುಂಡಗೋಡದಿಂದ ಕಲಘಟಗಿ-ಯಲ್ಲಾಪೂರಗೆ ಹಾದು ಹೊಗುವ ರಸ್ತೆ ತಿರುವಿನಿಂದ ಕೂಡಿದೆ.ರಸ್ತೆಯಂಚಿಗೆ ಇರುವ ಅಮ್ಮಾಜಿ ಕೆರೆಯ ಏರಿಗೆ ತಡೆಗೋಡೆ ಇಲ್ಲದಿರುವದರಿಂದ  ವಾಹನ ಚಾಲಕರು ಆಯತಪ್ಪಿ ಕೆರೆಗೆ ಬಿದ್ದರೆ ಹರೋ ಹರಾ ಎನ್ನುವಂತಾಗಿದೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. 

ಸೂಮಾರು 74.00 ಹೇಕ್ಟರ ವಿಸ್ತೀರ್ಣದ ಅಮ್ಮಾಜಿ ಕೆರೆಯು ತಾಲೂಕಿನಲ್ಲಿಯೇ ಬಹು ದೊಡ್ಡಕೆರೆಯಾಗಿದೆ.   ಸತತ ಮಳೆಯಿಂದಾ ಈಗಾಗಲೆ ಅಮ್ಮಾಜಿ ಕೆರೆಯು 60% ರಷ್ಟು ನೀರು ತುಂಬಿದ್ದು  ಮುಂಡಗೋಡ ಪಟ್ಟಣದಿಂದಾ ವಾಹನ ಸಂಚಾರಕ್ಕೆ ಯಲ್ಲಾಪೂರ-ಕಲಘಟಗಿ ತಾಲೂಕುಗಳಿಗೆ ಇದು ಮುಖ್ಯ ರಸ್ತೆಯಾಗಿರುವುದರಿಂದ (ರಾಜ್ಯ ಹೇದ್ದಾರಿ) ವಾಹನಗಳು ಹಗಲಿರುಳು ಓಡಾಡುತ್ತವೆ. ಇಲ್ಲಿ ಹಲವು ಗ್ರಾಮಗಳಿಂದ ಬರುವ ಶಾಲಾ ಮಕ್ಕಳ ವಾಹನಗಳು  ಹಾಗೂ ಕಾರವಾರ,ಗೋವಾ ಮತ್ತು ದಾಂಡೇಲಿಗಳತ್ತ ಹೋಗುವ ನಾಲ್ಕು ಚಕ್ರ ಭಾರಿ ವಾಹನಗಳು ಸಂಚರಿಸುತ್ತವೆ. ಸ್ಥಳಿಯ ದ್ವಿಚಕ್ರ ವಾಹನಗಳು ಸಂಚರಿಸುವ ರಸ್ತೆ ಇದಾಗಿರುವುದರಿಂದ ದಿನದಿನ ಕಳೆದಂತೆ ಕೆರೆಯ ಮೇಲಿರುವ ತಿರುವಿನ ರಸ್ತೆ ಆಗಿರುವುದರಿಂದಾ ಮಳೆಗಾಲದಲ್ಲಿ  ವಾಹನ ಸವಾರರಿಗೆ ಚಾಲನೆಗೆ ಎಟವಟ್ಟು ಮಾಡುತ್ತಿರುವುದಂತ ನಿಜ ಈ ರಸ್ತೆಯಲ್ಲಿ ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೂ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುವುದಂತು ಕಂಡಿತಾ.ಅದರ  ಜೊತೆಗೆ ಹೇಸ್ಕಾಂ ಇಲಾಖೆಯ ಟ್ರಾನ್ಸ ಪಾರಂ ಕೂಡಾ ಕೆರೆಯ ದಂಡೆಯ ಮೇಲಿದ್ದು ಸಾರ್ವಜನಿಕರಿಗೆ ಹಾಗೂ ದನಕರುಗಳಿಗೆ ಪ್ರಾಣಾಪಾಯಕ್ಕೆ   ಆಹ್ವಾನ ನೀಡುವಂತಾಗಿದೆ. 

ಕೆರೆಯಲ್ಲಿ ನೀರು ತುಂಬಿರುವುದರಿಂದ ಕೆರೆ ಹಾಗೂ ರಸ್ತೆ ಸರಿಸಮವಾಗಿ ಕಾಣುತ್ತಿದ್ದು ರಾತ್ರಿ ಹೊತ್ತಿನಲ್ಲಿ ಪ್ರಯಾಣಿರಿಗೆ ರಸ್ತೆ ಯಾವುದು ಕೆರೆ ಯಾವುದು ಎಂದು ತಿಳಿಯುವುದಿಲ್ಲಾ.ಕೆರೆ ಏರಿಗೆ ತಡೆಗೊಡೆ ಇಲ್ಲದ ಕಾರಣ ಕಳೆದ ಕೆಲವು ವರ್ಷಗಳ ಹಿಂದೆ ತಾಲೂಕಿನ ಕೊಪ್ಪ ಗ್ರಾಮದ  ಖಾಸಗಿ ವಾಹನವೊಂದು ಬಿದ್ದು 10 ಕ್ಕೂ ಹೆಚ್ಚು ಜನ ಆಸ್ಪತೆಗೆ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಚಿಕ್ಕ ನೀರಾವರಿ ಇಲಾಖೆಯವರು ದನಕರುಗಳಿಗೆ ಹಾಗೂ ಪ್ರಾಣೆ ಪಕ್ಷೀಗಳಿಗೆ ನೀರಿನ    ತೊಂದರೆ ಆಗಬಾರದೆಂದು ಸಂಪೂರ್ಣ ಕೆರೆಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವದನ್ನು ನಿಷೇಧಿಸಲಾಗಿತ್ತು. ಚಿಕ್ಕ ನೀರಾವರಿ ಇಲಾಖೆಯವರು ಕಳೆದ 3 ವರ್ಷಗಳ ಹೀಂದೆ ಕೆರೆಯ ನೀರನ್ನು ಪೊಲಾಗದಂತೆ ಪಿಚ್ಚಿಂಗ ಕಾಮಗಾರಿ ಮಾಡಲಾಗಿತ್ತು ಅದರಿಂದ ಸ್ವಲ್ಪ ಮಟ್ಟಿಗೆ ಉಪಯೋಗವಾಗಿದ್ದರೂ ಕೂಡ  ಕಾಲುವೆಯ ಕಾಮಗಾರಿ ಸಮರ್ಪಕವಾಗಿ ಮಾಡದೆ ಇರುವುದರಿಂದಾ ಕೆರೆಯ  ನೀರು ಪೊಲಾಗುತ್ತಿದೆ. ಕೆರೆ ನಿಮರ್ಾಣವಾಗಿ ಶತಮಾನ ಕಳೆದರು  ಒಂದು ಬಾರಿ ಕೂಡ  ಕೆರೆಯ ಹೂಳುಯೆತ್ತದೆಯಿರುವದರಿಂದ ಕಸ ಕಡ್ಡಿಗಳು  ತಾಜ್ಯ ತುಂಬಿಕೊಂಡಿದೆ. 

ಕಳೆದ ವರ್ಷ ಬರಿದಾದ ಕೆರೆಯ ಹೂಳು ತೆಗೆಸಿದ್ದರೆ ಅದೆಷ್ಟೊ ರೈತರು ದನ ಕರುಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗುತ್ತಿತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕೆರೆಯ ಅಭಿವೃದ್ದಿಪಡಿಸುವತ್ತ ಮುಖ ಮಾಡದಿರುವದು ವಿಪಯರ್ಾಸವೇ ಸರಿ .