ಆರಂಭವಾಗದ ಕಾಮಗಾರಿಗಳು ಅಭಿವೃದ್ಧಿ ಕುಂಠಿತ

Unstarted works stunt development

ವರದಿ ಅಬೂಬಕರ ಯಡಹಳ್ಳಿ  

ಕೆರೂರ, 23 : ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಎಸ್ ಎಫ್ ಸಿ ಹಾಗೂ 15ನೇ ಹಣಕಾಸು ಯೋಜನೆ ಅಡಿ ಕೆಲವು ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇಸಿದರು, ಪಪಂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿಗಳು ಇನ್ನು ಆರಂಭವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ, 5 ಲಕ್ಷದ ಪಶು ಆಸ್ಪತ್ರೆ ಆವರಣ ಸುಧಾರಣೆ, 13 ಲಕ್ಷ ವೆಚ್ಚದಲ್ಲಿ ಜೈ ಭವಾನಿ ಕಾಲೋನಿ ರಸ್ತೆ ಸುಧಾರಣೆ ಸೇರಿ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಶೀಘ್ರ ಆರಂಭಿಸುವಂತೆ ಸೂಚಿಸಿದರು.  

ಕಾಮಗಾರಿಗಳ ಆರಂಭ ವಿಳಂಬಕ್ಕೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಮೇಶ್ ಮಾಡಬಾಳ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ. ನಗರದ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿದ್ದಾರೆ, ಅಧಿಕಾರಿಗಳ ಕಾರ್ಯವೈಕರಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ.ಬಾಕ್ಸ್‌ ;  

ಅನುದಾನ ಇಲ್ಲದೆ ಕಾಮಗಾರಿ ಭೂಮಿ ಪೂಜೆ ಮಾಡಲಾಗಿದೆ, ಈಗಲೇ ಅಧಿಕಾರಿಗಳು ಪೂರ್ಣ ಮಾಡಿದ ಹಳೆಯ ಕಾಮಗಾರಿ ಬಿಲ್ ನೀಡಿದ ಕಾರಣ ಸಂಕಷ್ಟದಲ್ಲಿದ್ದೇವೆ, ಅನುದಾನದ ಹಣ ಬರುತ್ತೋ ಇಲ್ವೋ ಎಂಬ ಭೀತಿಯಲ್ಲಿದ್ದೇವೆ ಹೀಗಾಗಿ ಕಾಮಗಾರಿ ಆರಂಭಿಸಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಗುತ್ತಿಗೆದಾರ ತಿಳಿಸಿದ್ದಾನೆ.