ರಾಷ್ಟ್ರೀಯ ಜನತಾ ನ್ಯಾಯಾಲಯಕ್ಕೆ ಅಭೂತಪೂರ್ವ ಸ್ಪಂದನೆ ವಿಚ್ಛೇಧನ ಕೋರಿದ ದಂಪತಿಗಳಿಗೆ ಒಂದಾಗಿಸಿದ ಜನತಾ ಅದಾಲತ್

Unprecedented response to National Janata Court Janata Adalat unites couples seeking divorce

ರಾಷ್ಟ್ರೀಯ ಜನತಾ ನ್ಯಾಯಾಲಯಕ್ಕೆ ಅಭೂತಪೂರ್ವ ಸ್ಪಂದನೆ ವಿಚ್ಛೇಧನ ಕೋರಿದ ದಂಪತಿಗಳಿಗೆ ಒಂದಾಗಿಸಿದ ಜನತಾ ಅದಾಲತ್ 

ವಿಜಯಪುರ 15: ವಿಜಯಪುರ ಜಿಲ್ಲೆಯಲ್ಲಿ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್‌ಗೆ ಅಭೂತಪೂರ್ವ ಸ್ಪಂಧನೆ ದೊರೆತಿದ್ದು, ಹಲವಾರು ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳಿಗೆ  ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.  

ಕೌಂಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ 3 ಜೋಡಿಗಳನ್ನು ಜನತಾ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಒಂದು ಗೂಡಿಸಿ ಕಳುಹಿಸಲಾಯಿತು. ಅದರಂತೆ ವಿವಿಧ ಪ್ರಕರಣಗಳಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಮೂಲಕ ಯಶಸ್ವಿಯಾಗಿ ಜನತಾ ಅದಾಲತ್ ಜರುಗಿತು. 

ಜನತಾ ನ್ಯಾಯಾಲಯದ ಯಶಸ್ವಿಗೆ ಸಹಕರಿಸಿದ ಎಲ್ಲ ವಕೀಲರುಗಳು, ಕಕ್ಷಿದಾರರು, ಪೊಲೀಸ್ ಅಧಿಕಾರಿಗಳು ಜನತಾ ನ್ಯಾಯಾಲಯದಲ್ಲಿ ಭಾಗಿಯಾದ ಕಾನೂನು ಪದವಿ ವಿದ್ಯಾರ್ಥಿಗಳು, ಉಪನ್ಯಾಸಕರು, ಪೆನಲ್ ವಕೀಲರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶರುಗಳಾದ  ಅರವಿಂದ ಎಸ್‌.ಹಾಗರಗಿ, ನ್ಯಾಯಾಧೀಶ ಸತೀಶ ಎಲ್‌.ಪಿ. ಪಾಟೀಲ ಮೋಹನಕುಮಾರ ಭೀಮನಗೌಡ, ಶ್ರೀಮತಿ ಸಿಂಧು ಪೋತದಾರ ಅವರು ಅಭಿಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.