ಅನವಶ್ಯಕ ಎತ್ತರದ ಸಿಮೆಂಟ್ ರಸ್ತೆ: ಹೊಂಡಕ್ಕೆ ಬೀಳುತ್ತಿರುವ ವಾಹನಗಳು

ಲೋಕದರ್ಶನ ವರದಿ

ಕಾರವಾರ 19 : ನಗರದ ನ್ಯೂ ಕೆಎಚ್ಬಿ ಕಾಲೊನಿಯಲ್ಲಿ ನಡೆಸಲಾದ ಮೂರನೇ ಹಂತದ ನಗರೋತ್ಥಾನದ ಅಸಮರ್ಪಕ ರಸ್ತೆ ಕಾಮಗಾರಿಯಿಂದ ವಾಹನ ಓಡಾಡಲು ತೊಂದರೆಯಾಗುತ್ತಿದ್ದು, ಕಾರೊಂದು ರಸ್ತೆ ಅಂಚಿನ ಚರಂಡಿಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.

                ನ್ಯೂ ಕೆಎಚ್ಬಿ ಕಾಲೂನಿಯ ದಕ್ಷಿಣ ಭಾಗದಲ್ಲಿ 15 ವರ್ಷಗಳ ನಂತರ ಮುಖ್ಯ ರಸ್ತೆ ಮಾತ್ರ  ಕಾಂಕ್ರೀಟ್ ರಸ್ತೆ ನಿಮರ್ಿಸಲಾಗಿದ್ದರೂ, ಕೆಲವು ಕಡೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣನ್ನೂ ಹಾಕದೇ ಹಾಗೇ ಬಿಡಲಾಗಿದೆ. ಕೆಲವು ಕಡೆ ಚರಂಡಿ ಮತ್ತು ರಸ್ತೆಯ ಮಧ್ಯದಲ್ಲಿ ಮಣ್ಣು ತುಂಬಿಲ್ಲ. ಇದರಿಂದ ವಾಹನ ಸವಾರರಿಗೆ ಸಂಚಾರ ಮಾಡಲು ತುಂಬಾ ಸಮಸ್ಯೆಯಾಗುತ್ತಿದೆ.

                ರಸ್ತೆಯು ನೆಲಮಟ್ಟದಿಂದ ಸುಮಾರು ಒಂದು ಅಡಿಯಷ್ಟು ಎತ್ತರದಲ್ಲಿರುವುದರಿಂದ ಎರಡೂ ಪಕ್ಕದಲ್ಲಿ ಮಣ್ಣನ್ನು ತುಂಬಿ ರಸ್ತೆಯನ್ನು ಸಮಯಟ್ಟು ಗೊಳಿಸುವ ಕಾರ್ಯ ಮಾಡಬೇಕಿತ್ತು, ಅದನ್ನು ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆಎರಡು ದೊಡ್ಡ ವಾಹನಗಳು ಮುಖಾಮುಖಿಯಾದರೆ ರಸ್ತೆಯ ಬದಿಗೆ ಸರಿಯಲು ಸ್ಥಳವೇ ಇಲ್ಲದಂತಾಗಿದೆ. ಇದರ ಪರಿಣಾಮ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ಕಾರೊಂದು ಚರಂಡಿಗೆ ಬಿದ್ದು, ಹಾನಿಗೀಡಾಗಿದೆ. ಬಗ್ಗೆ ಕೂಡಲೇ ನಗರಸಭೆಯು ಎಚ್ಚೆತ್ತುಕೊಂಡು ಕಾಲೊನಿಯ ರಸ್ತೆಯ ಎರಡೂ ಪಕ್ಕದಲ್ಲಿ ಮಣ್ಣು ತುಂಬಿಸಿ ಸರಿ ಮಾಡುವ ಕೆಲಸ ಮಾಡಬೇಕು. ರಸ್ತೆಗೆ ಕೋಟಿ ಕೋಟಿ ಹಣದಿಂದ ಕಾಂಕ್ರೀಟ್ ರಸ್ತೆ ಮಾಡಿ ರಸ್ತೆಯ ಎರಡೂ ಬದಿಗೆ ಮಣ್ಣು ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

                ನ್ಯೂ ಕೆಎಚ್ಬಿ ಕಾಲೊನಿಯ ಅಡ್ಡ ರಸ್ತೆಗಳು ಡಾಂಬರ ಸಹ ಕಾಣದೇ 20 ವರ್ಷಗಳೇ ಕಳೆದಿವೆ. ಕಾಲೂನಿಯ ಉತ್ತರ ಭಾಗದ ರಸ್ತೆಗಳಲ್ಲಿ ಆರು ರಸ್ತೆಗಳಿಗೆ ಟೆಂಡರ್ ಆಗಿದ್ದರೂ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿಲ್ಲ. ಇಲ್ಲಿನ ನಿವಾಸಿಗಳು ಇದೀಗ ಮತ್ತೊಂದು ಪ್ರತಿಭಟನೆಗೆ ತಯಾರಿ ನಡೆಸಿದ್ದು, ಸದ್ಯದಲ್ಲೇ ಬೀದಿಗಿಳಿಯುವ ಸಾಧ್ಯತೆಗಳಿವೆ.