ಲಕ್ನೋ 30: ಉನ್ನಾವೋ ಅತ್ಯಾಚಾರ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಕೂಡ ನಡೆಯುತ್ತಿದೆಎಂದೂ ಅವರು ಪ್ರತಿಪಾದಿಸಿದರು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಪಕ್ಷದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ಆಡಳಿತಾರೂ ಢ ಬಿಜೆಪಿ ಬೆಂಬಲವಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್, ಬಿಎಸ್ಪಿ ಮತ್ತು ಎಸ್ಪಿ ಸೇರಿ ಅನೇಕ ಪಕ್ಷದ ನಾಯಕರು ಆರೋಪಿಸಿದ್ದರು. ಜೈಲಿನಲ್ಲಿರುವ ಬಿಜೆಪಿ ಶಾಸಕ ಸೆಂಗಾರ್ ಮತ್ತು ಇತರ 9 ಮಂದಿಯ ಮೇಲೆ ಸೋಮವಾರ ಕೊಲೆ ಪ್ರಕರಣ ದಾಖಲಿಸಲಾಗಿದೆ, 19 ವರ್ಷದ ಅತ್ಯಾಚಾರ ಸಂತ್ರಸ್ಥೆ ಹಾಗೂ ಅವರ ಕುಟುಂಬ, ವಕೀಲರು ಪ್ರಯಾಣಿಸುತ್ತಿದ್ದ ಕಾರು ರಾಯ್ ಬರೇಲಿಯಲ್ಲಿ ಟ್ರಕ್ ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದರು. ಅಲ್ಲದೆ ಘಟನೆಯಲ್ಲಿ ಸಂತ್ರಸ್ಥೆ ಹಾಗೂ ಅವಳ ವಕೀಲರು ಗಂಭೀರ ಗಾಯಗೊಂಡಿದ್ದಾರೆ.
ಭಾನುವಾರದ ಕಾರು ಅಪಘಾತದ ಹಿಂದೆ "ಪಿತೂರಿ" ಇದೆ ಎಂದು ಆರೋಪಿಸಿ ಸಂಸ್ತ್ರಸ್ಥೆಯ ಕುಟುಂಬ ದೂರು ದಾಖಲಿಸಿದೆ. ಆಕೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಹೊರಗೆ ಧರಣಿ ಕುಳಿತಿದ್ದಾರೆ. ಸಂತ್ರಸ್ಥೆಯ ಚಿಕ್ಕಪ್ಪ ಜೈಲಿನಲ್ಲಿರುವ ಮಹೇಶ್ ಸಿಂಗ್ ತನ್ನ ಪತ್ನಿಯ ಕೊನೆಯ ವಿಧಿಗಾಗಿ ಪೆರೋಲ್ ಕೋರಿದ್ದು ನ್ಯಾಯಾಲಯ ಅವರಿಗೆ ದೊನ ಮಟ್ಟಿಗೆ ಪೆರೋಲ್ ನೀಡಿದೆ.