ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು

ಲಕ್ನೋ, ಡಿ 8 :    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಭೇಟಿ ನೀಡುವವರೆಗೂ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬದ ಸದಸ್ಯರು  ಬಿಗಿಪಟ್ಟು ಹಿಡಿದಿದ್ದಾರೆ.  ಶನಿವಾರ ಸಂಜೆಯೇ  ಸಂತ್ರಸ್ತೆಯ ಮೃತದೇಹ ಉನ್ನಾವೋ ಗ್ರಾಮ  ತಲುಪಿದ್ದು , ಇಂದು ಅಂತ್ಯಸಂಸ್ಕಾರ ನೆರವೇರಿಸಿಬೇಕಿತ್ತು. ಆದರೇ ಮುಖ್ಯಮಂತ್ರಿ ಭೇಟಿ ನೀಡುವವರೆಗೂ ಅಂತಿಮ ವಿಧಿ ವಿಧಾನ  ನೆರವೇರಿಸುವುದಿಲ್ಲವೆಂದು ಕುಟುಂಬದ ಸದಸ್ಯರು ಬಿಗಿ  ಪಟ್ಟು ಹಾಕಿದ್ದಾರೆ.  ದೆಹಲಿಯ ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಸಾವು -ಬದಕಿನ  ಹೋರಾಟ ನಡೆಸಿದ್ದ  ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಶುಕ್ರವಾರ ರಾತ್ರಿ ದೆಹಲಿಯಲ್ಲೀ ಕೊನೆಯುಸಿರೆಳೆದಿದ್ದರು.  ಆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದ ಸಚಿವರು ಸಂತ್ರಸ್ತೆಯ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು.ಈ ವೇಳೆ ಗ್ರಾಮದಲ್ಇ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿ,  ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು.  ಕುಟುಂಬದ ಸದಸ್ಯರಿಗೆ   ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ  ಪರಿಹಾರ ಹಾಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನೀಡುವ  ಭರವಸೆ ಕೊಡಲಾಗಿತ್ತು.