ಬೆಳಗಾವಿ: ವಿಶ್ವವಿದ್ಯಾಲಯಗಳು ದೇಶದ ಸಂಪತ್ತು, ದೇಶವು ಬೌದ್ಧಿಕವಾಗಿ ಬೆಳೆದಾಗ ಮಾತ್ರ ಅದು ಸಂಪದ್ಭರಿತವಾಗಿರುತ್ತದೆ. ಆ ಸಂಪತ್ತನ್ನು ಬೆಳೆಸುವಲ್ಲಿ ಸಕರ್ಾರಗಳು ಮುತುವಜರ್ಿಯಿಂದ ಮುಂದಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾಥರ್ಿಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಪ್ರಾಧ್ಯಾಪಕರುಗಳಿಗೆ ಮಹತ್ವ ದೊರೆತಲ್ಲಿ ಮಾತ್ರ ವಿದ್ಯಾಥರ್ಿಗಳ ಭವಿಷ್ಯ ತಂತಾನೇ ರೂಪಿತವಾಗುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ. ವೆಂಕಟೇಶ ಅಭಿಪ್ರಾಯಪಟ್ಟರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಗುರುವಾರ 23 ರಂದು ವಿಶ್ವವಿದ್ಯಾಲಯವು ಆಯೋಜಿಸಿದ ಅಭಿನಂದನಾ ಸಮಾ ರಂಭದಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಇಂದು ಸಕರ್ಾರಗಳು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಪ್ರಾಮುಖ್ಯತೆಯನ್ನು ನೀಡಬೇಕೆಂದು ಆಗ್ರಹಿ ಸಿದರು.
ಸಿಂಡಿಕೇಟ್ ಸದಸ್ಯ ನರಸಿಂಹ ರಾಯಚೂರ ಪ್ರಾಸ್ತವಿಕವಾಗಿ ಮಾತನಾಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಅತಿ ಹೆಚ್ಚು ಹೆಸರು ಮಾಡುತ್ತಿದೆ. ವಿಶ್ವವಿದ್ಯಾಲಯದ ಸಂಸರ್ಗದಲ್ಲಿರುವ ಹಲವರು ಲೋಕಸೇವಾ ಆಯೋಗದ ಸದಸ್ಯರಾಗಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ ಎಂದು ಅಭಿ ಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳು, ವಿಶ್ವವಿದ್ಯಾಲಯವು ನೀಡಿದ ಅನುಭವವೇ ನಾನು ಉನ್ನತ ಹುದ್ದೆ ಪಡೆದುಕೊಳ್ಳಲು ನೆರವಾಯಿತು ಎಂದು ತಿಳಿಸಿಕೊಟ್ಟರು. ಮತ್ತೊಬ್ಬ ಅತಿಥಿಗಳಾಗಿದ್ದ ಪ್ರೊ. ರಂಗರಾಜ ವನದುರ್ಗ ಅವರು ಮಾತನಾಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಭವಿಷ್ಯದ ಮಹತ್ವದ ವಿಶ್ವವಿದ್ಯಾಲಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಲೋಕಸೇವಾ ಆಯೋಗದ ಸದಸ್ಯರಾದ ಶ್ರೀ ವಿಜಯಕುಮಾರ ಕುಚನೂರೆಅವರು ಸನ್ಮಾನವನ್ನು ಸ್ವೀಕರಿಸಿ ವಿಶ್ವವಿದ್ಯಾಲಯದ ಔದಾರ್ಯತೆ ಮತ್ತು ಹೃದಯವಂತಿಕೆಯನ್ನು ಸ್ಮರಿಸಿಕೊಂಡರು. ಪ್ರೊ. ಎಂ.ಬಿ. ಹೆಗ್ಗಣ್ಣವರ ಮಾತನಾಡಿ ಉತ್ತರ ಕನರ್ಾಟಕದ ಜೀವನಾನುಭವವು ನನ್ನನ್ನು ಇಂತಹ ಹುದ್ದೆಗೆ ಬರುವಲ್ಲಿ ಸಹಾಯ ಮಾಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಹತ್ತರಿಂದ-ಹದಿನೈದು ಅಧ್ಯಯನ ವಿಭಾಗಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಅಧ್ಯಕ್ಷರು ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ.ಎನ್. ಪಾಟೀಲರು ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವವಿದ್ಯಾಲಯದ ಜಮೀನಿನ ವಿಷಯವಾಗಿ ನೆರವಾಗುವಂತೆ ಹೊಸದಾಗಿ ಆಗಮಿಸಿದ ಸಿಂಡಿಕೇಟ್ ಸದಸ್ಯರುಗಳಲ್ಲಿ ಮನವಿಯಿಟ್ಟರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಲೋಕಸೇವಾ ಆಯೋಗದ ಸದಸ್ಯರುಗಳಿಗೆ ಹಾಗೂ ವಿಶ್ವವಿದ್ಯಾಲಯದಿಂದ ಆಯ್ಕೆಯಾದ ಕುಲಪತಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಹಾಗೂ ಶಿಕ್ಷಕರ ಸಂಘದ ವತಿಯಿಂದ ಗೌರವವನ್ನು ಸಮಪರ್ಿಸಲಾಯಿತು. ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿಯವರು ಸ್ವಾಗತವನ್ನು ಕೋರಿದರು, ಕುಲಸಚಿವರು(ಮೌಲ್ಯಮಾಪನರಾದ) ಪ್ರೊ. ಅಶೋಕ ಡಿಸೋಜಾ ಇವರು ವಂದನಾರ್ಪಣೆ ಸಲ್ಲಿಸಿದರು. ಡಾ.ಅರವಿಂದ ಕರಬಸನಗೌಡರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ರಶ್ಮಿ ಪೈ ಪ್ರಾರ್ಥನಾ ಗೀತೆಯನ್ನು ಹಾಡಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಗಳು ಅತಿಥಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.