ಕುವೆಂಪು ಸಾರಸ್ವತ ಲೋಕದ ಅಪೂರ್ವ ನಕ್ಷತ: ರಾಠೋಡ

ಮುಧೋಳ: ಮಾನವರಲ್ಲಿ ಪರಸ್ಪರ ಧರ್ಮ, ಜಾತಿ, ರಾಷ್ಟ್ರ ರಾಷ್ಟ್ರಗಳ ನಡುವಿನ ದ್ವೇಷ, ವೈಮನಸ್ಸಗಳ ಕಂದಕ ದೂರವಾಗಿ ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಎಲ್ಲಡೆ ಸಾಕಾರಗೊಳ್ಳಬೇಕು, ಕುವೆಂಪು ಅವರ ಕೃತಿಗಳ ಅಧ್ಯಯನದಿಂದ ಮನುಜ ಮತ ವಿಶ್ವಪಥದಲ್ಲಿ ನಡೆಯುವಂತಾಗಬೇಕು, ಕುವೆಂಪು ಸಾರಸ್ವತ ಲೋಕದ ಅಪೂರ್ವ ನಕ್ಷತ್ರವಾಗಿದ್ದು,ತಮ್ಮ ಕೃತಿಗಳ ಮೂಲಕ ಸ್ಮರಣೀಯರು ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಪ್ಪು ರಾಠೋಡ ಹೇಳಿದರು.

  ಬಾಗಲಕೋಟ ಬಿ.ವ್ಹಿ.ವ್ಹಿ ಸಂಘದ ಮುಧೋಳದ ಶ್ರೀ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಭಾನುವಾರ ದಂದು ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುವಂತೆ ಸರಕಾರ ಸುತ್ತೋಲೆ ಹೊರಡಿಸುವದರಿಂದ ಕುವೆಂಪು ರವರ ಕುರಿತು ವಿದ್ಯಾಥರ್ಿಗಳಿಗೆ ಸಮಗ್ರ ಮಾಹಿತಿ ತಿಳಿಸಲು ಹೆಚ್ಚು ಅನುಕೂಲವಾಯಿತು ಎಂದರು.

  ಕುವೆಂಪು ಅವರ ರಚಿಸಿದ ನಾಟಕ,ಕಾದಂಬರಿ,ಗ್ರಂಥಗಳು ಮತ್ತು ಅವರ ಆತ್ಮ ಕಥನ,ಮಾನವನ ವ್ಯಕ್ತಿತ್ವ,ಅವನ ಮನಸ್ಸಿನ ಒಳಗಿನ ಸಂಘರ್ಷಗಳು,ಈ ಸಂಘರ್ಷಗಳಿಂದ ಹೊರಬಂದು,ಮಾನವ ಜಾತಿ ತಾನೊಂದೆ ವಲಂ ಎಂಬ ಸತ್ಯ ಅರಿವಾಗಿ, ಮನುಜ ಮತ ವಿಶ್ವ ಪಥದಲ್ಲಿ ನಡೆಯುವ ಹಾದಿಯನ್ನು ತೋರುತ್ತದೆ, ಕುವೆಂಪು ಕೃತಿಗಳನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು. 

  ಕನ್ನಡ ವಿಭಾಗದ ಉಪನ್ಯಾಸ ಪ್ರೊ.ವ್ಹಿ.ಎಂ.ಕಿತ್ತೂರ ಮಾತನಾಡಿ ಕುವೆಂಪು ಜಗತ್ತಿನ ಪ್ರಖ್ಯಾತ ಚಿಂತಕರು,ದಾರ್ಶನಿಕರು, ಬರಹಗಾರರಾಗಿದ್ದರು,ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ,ಅಲ್ಪ ಮಾನವವನ್ನು,ವಿಶ್ವ ಮಾನವನನ್ನಾಗಿ ಮಾಡಲಿದೆ, ಜಗತ್ತಿಗೆ ಮಾನವ ಸಂದೇಶ ನೀಡಿದ ಕುವೆಂಪು ಸದಾ ಸ್ಮರಣೀಯರು ಜಗದ ಕವಿ,ಯುಗದ ಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು,ತನ್ಮೂಲಕ ವಿಶ್ವಶಾಂತಿಗೆ ಎಲ್ಲರೂ ಶ್ರಮಿಸೋಣ ಎಂದರು.

   ಪ್ರೊ.ಎ.ಎಚ್.ಹಿರೇಮಠ ಮಾತನಾಡಿ ಮಗು ಹುಟ್ಟಿದಾಗ ಅದಕ್ಕೆ ಯಾವುದೇ ಮೇಲು-ಕೀಳು ಎಂಬ ಭಾವನೆ ಇರುವುದಿಲ್ಲ,ಯಾರೊಂದಿಗೂ ಭೇದ ಭಾವದಿಂದ ವತರ್ಿಸುವ ಗುಣ ಅದಕ್ಕಿರುವುದಿಲ್ಲ ಆದರೆ ನಮ್ಮ ಸಮಾಜದಲ್ಲಿ ಬೆಳೆಯುತ್ತ ಹೋದಂತೆ ಹಿರಿಯರಾದವರು ಮೇಲು-ಕೀಳು,ಚಿಕ್ಕವ-ದೊಡ್ಡವ, ಅಂತಸ್ತು ಮತ್ತಿತರ ವಿಷಯಗಳನ್ನು ಮಗುವಿನಲ್ಲಿ ತುಂಬುತ್ತಾ ಹೋಗುತ್ತಾರೆ.

  ಈ ಕಾರಣಕ್ಕಾಗಿ ಮಗು ವಿಶಾಲ ಮನೋಭಾವನೆ ಬೆಳೆಸಿಕೊಳ್ಳಲು ಆಗುವುದಿಲ್ಲ, ಆದ್ದರಿಂದ ನಾವೆಲ್ಲರೂ ಮಕ್ಕಳಲ್ಲಿ ವಿಶ್ವಮಾನವತೆಯನ್ನು ಬೆಳೆಸಬೇಕು,ತನ್ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ತೊಡೆದುಹಾಕಲು ಮುಂದಾಗಬೇಕು ಎಂದರು.

   ಬಿ.ಸಿ.ಎ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಲ್.ಲಿಂಗರಡ್ಡಿ,ದೈಹಿಕ ಶಿಕ್ಷಣ ನಿದರ್ೇಶಕ ಎ.ವೈ.ಮುನ್ನೋಳ್ಳಿ,ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ವ್ಹಿ.ಎಸ್. ಮುನವಳ್ಳಿ, ಬಸವರಾಜ ಕರಗೂಳಿ,ಆರಾಧ್ಯ ರಾಠೋಡ,ಪ್ರಣವ ಲಿಂಗರಡ್ಡಿ,ಪ್ರಣೀತ ಕಿತ್ತೂರ ಉಪಸ್ಥಿತರಿದ್ದರು.