ಉರ್ದು ಶಾಲೆಯಲ್ಲಿ ಸಮವಸ್ತ್ರ ವಿತರಣೆ

ಲೋಕದರ್ಶನವರದಿ

ರಾಣೇಬೆನ್ನೂರು13:  ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ಇದ್ದಾಗ ಉತ್ತಮ ಶಿಕ್ಷಣ ಪಡೆದರೆ ಮುಂದಿನ ಜೀವನವು ಉಜ್ವಲವಾಗಲು ಸಾಧ್ಯವಾಗುತ್ತದೆ. ಕಾರಣ ಪಾಲಕರು ತಮ್ಮ ಮಕ್ಕಳ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ನಿರಂಜನಾನಂದ ಸ್ವಾಮಿಗಳು  ಹೇಳಿದರು

       ತಾಲೂಕಿನ ಹೆಡಿಯಾಲ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಗೆ ಬಟ್ಟೆ. ಶೂ ವಿತರಿಸಿ ಮಾತನಾಡಿದರು. ಶಿಕ್ಷಣವು ಉತ್ತಮ ಗುಣಮಟ್ಟದ್ದಾಗಿದ್ದು  ಮನುಷ್ಯ ಹುಟ್ಟಿದ ಮೇಲೆ ಸಾಧನೆ ಮಾಡಲು ಛಲ ಇರಬೇಕು, ಆ ಗುರಿಗಾಗಿ ನಿರಂತರ ಶೃಮವಿರಬೇಕು ಎಂದರು.

      ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅದ್ಯಕ್ಷ ಎಸ್, ಎಚ್ ಮಜೀದ್ ಮಾತನಾಡಿ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು, ಉರ್ದು ಶಾಲೆಯನ್ನು ಅಭಿವೃದ್ದಿ ಪಡಿಸಿದ್ದಾರೆ. ಶಾಲೆಯ ಕೈ ತೋಟ ಮಾಡಿ ಮಕ್ಕಳಿಗೆ ಬಿಸಿ ಊಟಕ್ಕೆ ಬೇಕಾದ ತರಕಾರಿ ಬೆಳೆದು ವಿವಿಧ ಹಣಿನ ಗಿಡಗಳನ್ನು ಬೆಳಸಿ ಈ ಶಾಲೆ ಇತರರಿಗೆ ಮಾದರಿಯಾಗುವಂತೆ ಮಾಡಿದ್ದಾರೆ ಎಂದರು  ಹೆಡಿಯಾಲ ಗ್ರಾ.ಪಂ ಅದ್ಯಕ್ಷೆ ನಾಗಮ್ಮ ಕೋಳೂರು, ಪ್ರಧಾನ ಗುರು ಸಿ ಎಪ್ ಹುಲ್ಮನಿ ಶಿಕ್ಷಕಿ ಬಿ.ಜಿ ಕಲ್ಮನಿ, ಪರಿವರ್ತನಾ ಸಂಚಾಲಕಿ ಹಸಿನಾ ಹೆಡಿಯಾಲ, ಚಂದ್ರು ಹಾರನಹಳ್ಳಿ ಬಿ ಪಿ ಬಿದರಿ ಸೇರಿದಂತೆ ಮತ್ತಿತರರು ಇದ್ದರು