ನವದೆಹಲಿ, ಜ ೩೦: ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯ ಪ್ರದೇಶದಲ್ಲಿ ಗುರುವಾರ ಗುರುತುಸಿಗದ ವ್ಯಕ್ತಿಯೊಬ್ಬ ಬಂದೂಕು ಪ್ರದರ್ಶಿಸಿ, ಗುಂಡು ಹಾರಿಸುವ ಮೂಲಕ ತೀವ್ರ ಭಯ ಭೀತಿಯ ವಾತಾವರಣ ಸೃಷಿಸಿದ್ದ ಘಟನೆ ನಡೆಯಿತು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕೆಲವರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಓರ್ವ ಅಪರಿಚಿತ ಬಂದೂಕುಧಾರಿ ಅವರ ವಿರುದ್ದ ಘೋಷಣೆ ಕೂಗಿ ಮೇಲೆ ಗುಂಡು ಹಾರಿಸಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆಯಿತು.
ಮಾಧ್ಯಮ ವರದಿ ಪ್ರಕಾರ .. ಕೆಲವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಪ್ಪು ಕೋಟ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕನ್ನು ಹೊರತೆಗೆದು ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ಗುಂಡು ಹಾರಿಸಲು ಆರಂಭಿಸಿದ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಪೊಲೀಸರು ಅಪರಿಚಿತ ಬಂದೂಕು ದಾರಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಭಾರಿ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಉಪಸ್ಥಿತರಿದ್ದರು. ಸಿಎಎ ವಿರುದ್ಧ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು.