ಅಪರಿಚಿತ ಶವ ಪತ್ತೆ

Unidentified body found- Hubli Railway Station

ಹುಬ್ಬಳ್ಳಿ 31: ದಿ. 27ರಂದು   ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಿ.ಎಪ್‌. ನಂ-6 ರಲ್ಲಿ ನಿಂತಿದ್ದ ರೈಲುಗಾಡಿ ಸಂಖ್ಯೆ 07337 ಕೋಚ ನಂ- 104504 ನೇದ್ದರಲ್ಲಿ ಒಬ್ಬ ಅಪರಿಚಿತ ಗಂಡಸ್ಸು ವಯಸ್ಸು ಸುಮಾರು 25-30 ವರ್ಷದವನು ಸ್ವಾಭಾವಿಕವಾಗಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯ ಯುಡಿಆರ್ ನಂ-126/2024 ಕಲಂ 194 ಬಿ.ಎನ್‌.ಎಸ್‌.ಎಸ್‌. ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 

 ಮೃತನ ಚಹರೆ ವಿವರ 

ಅಪರಿಚಿತ ಗಂಡಸು, ವಯಸ್ಸು ಸುಮಾರು 25-30 ವರ್ಷ, 5.2’ ಅಡಿ ಎತ್ತರ, ಗೋದಿ ಮೈಬಣ್ಣ, ಮೈಯಿಂದ ತೆಳ್ಳಗೆ,  ನೇರ‌್ಡ್ಪ ಮೂಗು, ತಲೆಯಲ್ಲಿ ಕಪ್ಪು ಕೂದಲು ಕಪ್ಪು ಗಡ್ಡ ಮೀಸೆ ಬಿಟ್ಟಿರುತ್ತಾನೆ. ಬಲಗೈ ಅಂಗೈ ಹಾಗೂ ಪಕ್ಕದಲ್ಲಿ  ಗ. ಓಂಗಿಇಇಓ ಂಓಆ ಖಖಿಖಓ  ಭರತ ಅಂತ ಹಚ್ಚೆ ಹಾಕಿಸಿದ್ದು ಎಲ್ಲ ಅಕ್ಷರಗಳ ಕೊನೆಯಲ್ಲಿ ಹೃದಯ ಚಿತ್ರ ಇರುವ ಹಚ್ಚೆ ಇರುತ್ತದೆ. ಹಾಗೂ ಎದೆಯ ಮೇಲೆ 8ಓ ಹಚ್ಚೆ ಇದೆ. ಮತ್ತು ಎಡಗೈಯಲ್ಲಿ ಅಂಗೈ ಮೇಲೆ ಹಳೆಯ ಹರಿದ ಗಾಯವಾಗಿರುತ್ತದೆ. 

ಒಂದು ಬೂದು ಬಣ್ಣದ ಅದರ ಮೇಲೆ ಎಮರೆಡಿಂಗ್ ಚಿತ್ರಗಳಿರುವ ಫುಲ್ ರಡಿಮೇಡ ಶರ್ಟ, ಒಂದು ನೀಲಿ ಬಣ್ಣದ ಸ್ಟೋಟ್ಸ ಪ್ಯಾಂಟ್, ಒಂದು ಬೂದು ಬಣ್ಣದ ಉಡದಾರ  ಇರುತ್ತದೆ. 

ಈ ರೀತಿಯ ಚಹರೆ ಪಟ್ಟಿಯುಳ್ಳ ಅಪರಿಚಿತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದರೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ [0836] 2364751  9480802126 ನೆದ್ದಕ್ಕೆ ಸಂಪರ್ಕಿಸಲು ಕೋರಿದೆ.