ಬಾಗಲಕೋಟೆ05: ಅಧಿಕಾರ ಮಾಡುವುದಾದರೆ ಉತ್ತರ ಕನರ್ಾಟಕದಲ್ಲಿ ಮಾಡಬೇಕೆಂಬ ಮಾತು ಕೇಳಿ ಬರುತ್ತಿತ್ತು. ನಾನಿಲ್ಲಿ ಬಂದ ಮೇಲೆ ಅದು ನಿಜವೆಂದರಿತು ನನ್ನ ಜೀವನದಲ್ಲಿ ಮರೆಯಲಾಗದ ಜಿಲ್ಲೆ ಬಾಗಲಕೋಟೆಯಾಗಿದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿಂದು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಥಮಬಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಚಾಲುಕ್ಯರ ಅಧಿದೇವತೆ ಬನಶಂಕರಿ ಜಾತ್ರಾ ಸೇವೆ ಮಾಡುವ ಅವಕಾಶ ಒದಗಿಬಂದಿತು. ದೇವಿಯ ಆಶೀವರ್ಾದದಿಂದ ಕೆಲವೇ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸುವ ಶಕ್ತಿ ದೊರೆದಂತಾಗಿ ಬಂದ ಸಮಸ್ಯೆಗಳು ಗಾಳಿಯಲ್ಲಿ ಹಾರಿ ಹೋದಂತ ಅನುಭವವಾಯಿತು ಎಂದರು.
ಒಂದು ಜಿಲ್ಲೆಯ ಸಮಗ್ರ ಅಭಿವೃದ್ದಿಯಾಗಬೇಕಾದರೆ ಜಿಲ್ಲಾಧಿಕಾರಿಗಳೊಬ್ಬರಿಂದ ಸಾಧ್ಯವಿಲ್ಲ. ಎಲ್ಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸಾದ್ಯವೆಂದರು. ಅಧಿಕಾರ ವಹಿಸಿಕೊಂಡ ನಂತರ ಒಂದೊಂದಾಗಿ ಬಹುದೊಡ್ಡ ಸವಾಲುಗಳ ಬಂದರೂ ಕೂಡಾ ಅದರ ಜೊತೆಗೆ ಅನುಭವವು ಸಹ ಹೇರಳವಾಗಿ ದೊರಕಿದ್ದರಿಂದ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ ಎಂದರು. ಬಾಗಲಕೋಟೆ ಹೆಸರು ಇದುವರೆ ಸ್ಪಷ್ಟವಾಗಿರದೇ ಗೊಂದಲಮಯವಾಗಿದ್ದನ್ನು ಬಗೆಹರಿಸಬೇಕೆಂಬ ಸಂಕಲ್ಪ ನನಗೆ ಒದಗಿ ಬಂದು ಕನ್ನಡದಲ್ಲಿ ಬಾಗಲಕೋಟ, ಇಂಗ್ಲೀಷನಲ್ಲಿ ಬಾಗಲಕೋಟ್ ಎಂಬ ಹೆಸರು ಬದಲು ಇದು ಕೋಟೆ ನಾಡಾಗಿದ್ದರಿಂದ ಬಾಗಲಕೋಟೆ ಎಂಬ ಹೆಮ್ಮೆಯಿಂದ ಹೇಳುವದರ ಜೊತೆಗೆ ಆಡಳಿತದಲ್ಲಿ ಅದನ್ನು ಪ್ರಚಲಿತಗೊಳಿಸಿರುವುದಾಗಿ ತಿಳಿಸಿದರು. ಇದನ್ನು ಬೆಂಬಲಿಸಿದ ಜಿಲ್ಲೆಯ ಜನತೆಗೆ ಅಭಿನಂದನೆಗಳನ್ನು ತಿಳಿಸಿದರು.
ನೂತನ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ನನಗೆ ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುವ ಸುಯೋಗ ಒದಗಿಬಂದಿತು ಎಂದರು. ಜಿಲ್ಲೆಗೆ ಅಪ್ಪಳಿಸಿದ ಬೀಕರ ಪ್ರವಾಹದ ಎಲ್ಲ ಕಾರ್ಯವನ್ನು ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ರಾಮಚಂದ್ರನ್ ಅವರು ಸಮರ್ಪಕವಾಗಿ ನಿರ್ವಹಿಸಿದ್ದರಿಂದ ಅಳಿದುಳಿದ ಪರಿಹಾರ ಕಾರ್ಯ ಮಾಡುವಲ್ಲಿ ನಾವು ಸಫಲರಾದೆವು ಎಂದರು.
ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಬೆಳಗಾವಿ ಜಿಲ್ಲಾ ಸಿಇಓ ಆಗಿ ಕಾರ್ಯನಿರ್ವಹಿಸಿದ ರಾಮಚಂದ್ರನ್ ಅವರು ಗುಲಾಬಿ ಗ್ಯಾಂಗ್ ಬಗ್ಗೆ ಕೇಳಿದ್ದೆ ಆದರೆ ಅವರ ಜೊತೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿದ್ದರಿಂದ ಪ್ರಮುಖ ಎರಡು ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಪ್ರಗತಿ ಸಾಧಿಸುವಲ್ಲಿ ಯಶಸ್ವಿ ದೊರೆತಿದ್ದು, ಇದಕ್ಕೆ ಅಂದಿನ ಜಿಲ್ಲಾಧಿಕಾರಿ ರಾಮಚಂದ್ರನ್ ಅವರ ಸಹಕಾರವೇ ಕಾರಣವೆಂದರು.
ಅಂಗನವಾಡಿ ಕಾರ್ಯಕತರ್ೆ ಹಾಗೂ ಸಹಾಯಕರ ನೇಮಕಾತಿ ತುಂಬಾ ಜಟಿಲವಾಗಿತ್ತು. ನಿಯೋಜನೆಗೊಳಿಸಿದರೂ ಕೂಡಾ ಇನ್ನು ಬಾಕಿ ಉಳಿದಿದ್ದು, ಈ ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿರುವುದು ಸಂತಸ ತಂದಿದ್ದು, ಇನ್ನು ಅವಕಾಶ ವಂಚಿತ ವಿಧವೆಯರು ಮುಂದಿನ ದಿನಗಳಲ್ಲಿ ನೂತನ ಜಿಲ್ಲಾಧಿಕಾರಿಗಳು ಅವರಿಗೂ ಕೂಡಾ ಅವಕಾಶ ಮಾಡಿಕೊಡಲು ಕೋರಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೊಬೇಷನರಿ ಐ.ಎ,ಎಸ್ ಅಧಿಕಾರಿ ಗರಿಮಾ ಪನ್ವಾರ, ಜಮಖಂಡಿ ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ತಹಶೀಲ್ದಾರ ಪ್ರಕಾಶ ಚನಗೊಂಡ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಬಿಟಿಡಿಎ ಮುಖ್ಯ ಅಭಿಯಂತರ ವಾಸನದ ಸೇರಿದಂತೆ ಇತರರು ಉಪಸ್ಥಿತರಿದ್ದರು.